ಒಂದೇ ದಿನ 6 ಹೊಸ ಪ್ರಕರಣ!ರಾಜ್ಯದಲ್ಲಿ ಒಟ್ಟು 26 ಪ್ರಕರಣ ದಾಖಲು.
ಇಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ "ಜನತಾ ಕರ್ಫ್ಯೂ" ನಡುವೆ ರಾಜ್ಯದಲ್ಲಿ ಇಂದು ಹೊಸದಾಗಿ 6 ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 2 ದಿನದಲ್ಲಿ 11 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 26ಕ್ಕೆ ಏರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಜನತಾ ಕರ್ಫ್ಯೂಗೆ ಸಾರ್ವಜನಿಕವಾಗಿ ವ್ಯಾಪಕ ಬೆಂಬಲ ದೊರೆತಿದೆ. ಇಡೀ ದೇಶ ಸ್ತಬ್ದವಾಗಿತ್ತು. ಆದರೆ ಕೊರೋನಾ ಪೀಡಿತರ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಇಂದು ಎಲ್ಲೆಲ್ಲಿ ಪ್ರಕರಣ? :
21ನೇ ರೋಗಿ - ಧಾರವಾಡ ಮೂಲದ 35 ವರ್ಷದ ಪುರುಷ
22ನೇ ರೋಗಿ - ಗೌರಿಬಿದನೂರು 64 ವರ್ಷದ ಮಹಿಳೆ.23ನೇ ರೋಗಿ - ಬೆಂಗಳೂರು ಮೂಲದ 36 ವರ್ಷದ ಮಹಿಳೆ.
24ನೇ ರೋಗಿ - ಬೆಂಗಳೂರು ಮೂಲದ 27 ವರ್ಷದ ಯುವಕ
25ನೇ ರೋಗಿ - ಬೆಂಗಳೂರು ಮೂಲದ 51 ವರ್ಷದ ಪುರುಷ
26ನೇ ರೋಗಿ - ಭಟ್ಕಳದ 21ವರ್ಷದ ಯುವಕ. ಮಂಗಳೂರಲ್ಲಿ ದಾಖಲು. ಇವರೆಲ್ಲರನ್ನೂ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.