ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟದ ವ್ಯವಸ್ಥೆ

ಕರೋನಾ ವೈರಸ್ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ನಲ್ಲಿ ಮಾರ್ಚ್ 31ರವರೆಗೆ ಉಚಿತ ಊಟದ ವ್ಯವಸ್ಥೆ ಬಡವರಿಗೆ ನೀಡಲಾಗುವುದು ಸಿಎಂ ಬಿಎಸ್ ಯಡಿಯೂರಪ್ಪ.

ಕರೋನಾ ವೈರಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ನಿಟ್ಟಿನಲ್ಲಿ ಜನರನ್ನು ಮನೆಯಿಂದ ಹೊರಗೆ ಬರಬೇಡಿ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಈ ರೀತಿಯ ಕ್ರಮ ಕೈಗೊಳ್ಳುತ್ತಿದೆ .ಆದರೂ ಬಹಳಷ್ಟು ಜನ "ಸೋಂಕಿತರು ಹೊರಗಡೆ ಬಂದು ಸಮಾಜದಲ್ಲಿ ಈ  ವೈರಾಣು ಹರಡುತ್ತಿದ್ದಾರೆ "ಇದು ಬಹಳ ಬೇಸರದ  ಸಂಗತಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ವಿಷಾದ ವ್ಯಕ್ತಪಡಿಸಿದರು.


ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದಂತೆ ಬಡವರ ಹಿತದೃಷ್ಟಿಯಿಂದ ಉಚಿತ ಊಟ ನೀಡುವುದು ಒಳ್ಳೆಯದು. ಹಲವಾರು ಮಂದಿ ಬಡವರು,ದಿನಗೂಲಿ ನೌಕರರು, ಕೆಲಸ ವಿಲ್ಲದೆ ಪರೆದಾಡುತ್ತಿದ್ದಾರೆ ಈ ಪುಟ್ಟ ಸೇವೆಯಿಂದ ಬಡವರಿಗೆ ಹಾಗೂ ಆರ್ಥಿಕವಾಗಿ, ಹಿಂದುಳಿದವರಿಗೆ,ಒಂದು ರೀತಿ ಚೈತನ್ಯ ನೀಡುವ ಕೆಲಸಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೈ ಹಾಕಿದ್ದಾರೆ.

ಅಂತೆಯೇ ಈಗ ಎಲ್ಲಾ ಇಂದಿರಾ ಕ್ಯಾಂಟೀನ್ನಲ್ಲಿ, ದಿನಪೂರ್ತಿ ಬಡವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.ಆದರೆ ಇಲ್ಲೊಂದು ಸವಾಲಿನ ಸಂಗತಿ  ಇದೆ ಏನಪ್ಪಾ ಎಂದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ  ರೀತಿ ಸರಿ ಇದೆ. ಆದರೆ ಯಾರನ್ನು ಬಡವರು ಯಾರಿಗೇ ಉಚಿತ  ಊಟದ ವ್ಯವಸ್ಥೆ ನೀಡುತ್ತಾರೆ ಎಂದು ಗುರುತಿಸುವ ಕಾರ್ಯ ಬಹಳ ದೊಡ್ಡದಾಗಿದೆ.