ಮದುವೆಯಾದ 13 ದಿನಕ್ಕೆ ಪತಿಯನ್ನು ಕಳೆದುಕೊಂಡ ಪತ್ನಿ .....!!

ಮದುವೆಯಾದ 13 ದಿನಕ್ಕೆ ಪತಿಯನ್ನು ಕಳೆದುಕೊಂಡ ಪತ್ನಿ .......


 ನವದೆಹಲಿ :CAA ಹಾಗೂ  NRC ವಿಚಾರಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಹೊತ್ತಿ ಉರಿಯುತ್ತಿದೆ .ಹಾಗೂ ಹಲವಷ್ಟು ಜೀವಗಳು ಬಲಿಯಾಗಿವೆ .

ಫೆಬ್ರವರಿ 14 ರಂದು  ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವತಿಯ ದಾಂಪತ್ಯ ಜೀವನಕ್ಕೆ ಬರಸಿಡಿಲು ಬಡಿದಂತಾಗಿದೆ .ಕೆಲಸ ಮುಗಿಸಿ ಮನೆಗೆ ಹೊರಟ ಪತಿ ಬೀದಿಯಲ್ಲಿ ಪ್ರಾಣ ಬಿಟ್ಟಿದ್ದಾನೆ .ಮದುವೆಯಾದ 13 ದಿನಕ್ಕೆ ಗಂಡನನ್ನು ಕಳೆದುಕೊಂಡ ಪತ್ನಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ .

 ಫೆಬ್ರವರಿ.14ರಂದಷ್ಟೇ ಈಶಾನ್ಯ ದೆಹಲಿಯ ಮುಸ್ತಫಾಬಾದ್ ನಿವಾಸಿ ಆಶಿಕ್ ಹುಸೇನ್ ಹಾಗೂ ತಸ್ಲೀಮ್ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಫೆಬ್ರವರಿ.24ರಂದು ಕೆಲಸ ಮುಗಿಸಿಕೊಂಡು ಸಂಜೆ ಬೇಗ ಮನೆ ಕಡೆಗೆ ಹೊರಟಿದ್ದ ಆಶಿಕ್ ಹುಸೇನ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಆಶಿಕ್ ಕತ್ತಿಗೆ ಚಾಕುವಿನಿಂದ ಇರಿದಿದ್ದು, ದೇಹದ ಐದಾರು ಕಡೆ ಗುಂಡೇಟು ಬಿದ್ದಿತ್ತು. ಗಾಯಗೊಂಡ ಆಶಿಕ್ ದೆಹಲಿಯ ಅಲ್ ಹಿಂದ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.