ಹುಟ್ಟುಹಬ್ಬದ ದಿನದಂದೇ ಸರ್ಕಾರಿ ಬಂಗಾರ ಕಾವೇರಿಗೆ ಸಿಎಂ ಬಿ.ಸ್.ವೈ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹುಟ್ಟುಹಬ್ಬದಂದೇ  ಸರ್ಕಾರಿ ನಿವಾಸ 'ಕಾವೇರಿ' ಗೃಹಕ್ಕೆ ಪೂಜೆ ಸಲ್ಲಿಸಿ ಪ್ರವೇಶಿಸಿದರು. ಯಡಿಯೂರಪ್ಪನವರು ಸರ್ಕಾರಿ ಬಂಗಲೆ 'ಕಾವೇರಿಯಲ್ಲಿ' ಇನ್ನು ಮುಂದೆ ವಾಸವಿರಲಿದ್ದಾರೆ.
ವಿಶೇಷವೆಂದರೆ ತಮ್ಮ ಹುಟ್ಟುಹಬ್ಬದ ದಿನದಂದೇ ಈ ಮನೆಗೆ ಹೊಸದಾಗಿ ಮತ್ತೊಮ್ಮೆ ಪ್ರವೇಶಿಸಲಿದ್ದಾರೆ.

ಮುಖ್ಯಮಂತ್ರಿಯಾಗಿ ಇಷ್ಟು ತಿಂಗಳು ಕಳೆದರೂ ಬಿ.ಎಸ್. ಯಡಿಯೂರಪ್ಪನವರು ತಮ್ಮ ಸ್ವಂತ ಗೃಹ 'ಧವಳಗಿರಿ'  ಡಾಲರ್ಸ್ ಕಾಲೋನಿಯಲ್ಲಿ ವಾಸವಾಗಿದ್ದರು.

ಕಳೆದ ಆರು ವರ್ಷಗಳಿಗು ಹೆಚ್ಚು ಅವಧಿಯವರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಕಾವೇರಿ' ಬಂಗಲೆಯಲ್ಲಿ ವಾಸವಿದ್ದರು.
ಜನವರಿ 29ರಂದು ಆ ನಿವಾಸ ತೊರೆದು ಕುಮಾರಕೃಪ -ಒಂದಕ್ಕೆ ತಮ್ಮ ನಿವಾಸ ಬದಲಿಸಿಕೊಂಡರು.

ರಾಜ್ಯದ ಮುಖ್ಯಮಂತ್ರಿಯಾಗಿ ಯಾರೇ ಅಧಿಕಾರ ಸ್ವೀಕರಿಸಿದರು  'ಕಾವೇರಿ' ಗೃಹದಲ್ಲಿ ಇರುವುದು ವಾಡಿಕೆ ಆಗಿದೆ.