ಕೊಪ್ಪಳದ ಜನೇವರಿ 17 ರಿಂದ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭ....
ಜನವರಿ 17 ರಿಂದ 31 ವರೆಗೆ ಪ್ರಮುಖ 7 ಸ್ಥಳದಲ್ಲಿ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು.. ಜಿಲ್ಲೆಯ ಪ್ರಮುಖ 8 ಸ್ಥಳದಲ್ಲಿ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಈ ಕುರಿತು ಪ್ರಕಟಣೆ ಹೊರಡಿಸಿದ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಜನವರಿ 17 ರಿಂದ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿ ಜನವರಿ 31ವರಗೆ ಖರೀದಿ ಕೇಂದ್ರಗಳನ್ನು ಅನುಮತಿಯನ್ನು ಪಡೆಯಲಾಗಿದೆ.ರೈತರಿಂದ ಎಕರೆಗೆ 5 ಕ್ವಿಂಟಾಲ್ ರಂತೆ ತಲಾ ರೈತರಿಗೆ ಗರಿಷ್ಟ 10 ಕ್ವಿಂಟಾಲ್ ಮಾತ್ರ ತೊಗರಿ ಖರೀದಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ರೂಪಾಯಿ 5800 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ (ರೂಪಾಯಿ 300) ಸೇರಿದಂತೆ 6100 ರೂಪಾಯಿಗೆ ಖರೀದಿಸಲಾಗುತ್ತದೆ.ಪ್ರಮುಖ ಸ್ಥಳದಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು.
1.ಕೊಪ್ಪಳ TAPCMS ಕೊಪ್ಪಳ,2.ಹಿರೇಸಿಂಧೋಗಿ PACS ಹಿರೇಸಿಂಧೋಗಿ,3.ಕುಕನೂರು PACS ಕುಕನೂರು & ಮಸಬಹಂಚಿನಾಳ PACS,4.ಕುಷ್ಟಗಿ PACS ಕುಷ್ಟಗಿ,5.ತಾವರಗೇರಾ PACS ಮೆಣೆದಾಳ,6.ಹನುಮಸಾಗರ PACS ಹನುಮಸಾಗರ,7.ನವಲಿ(ಕನಕಗಿರಿ) PACS ನವಲಿ.ಈ ಪ್ರಮುಖ ಕೇಂದ್ರಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ವರದಿ : ಶರಣಪ್ಪ ಕುಂಬಾರ ತಾವರಗೇರಾ