ಮುಂಬೈಯಿಂದ ಬಾಲಿವುಡ್ ಎತ್ತಂಗಡಿ..? ಯುಪಿ ಯಲ್ಲಿ ಬೃಹತ್ ಫಿಲ್ಮ್ ಸಿಟಿಯ ನಿರ್ಮಾಣ..? ಸಿನಿಉದ್ಯಮದಾರರೊಂದಿಗೆ ಯೋಗಿ ಆದಿತ್ಯನಾಥ್ ಮಾತುಕತೆ
ವರದಿ : ನಾಗರಾಜ್ ನಂದಿಹಳ್ಳಿ
"ಗೌತಮ್ ಬುದ್ಧ ನಗರದಲ್ಲಿ ಯುಪಿ ಸರ್ಕಾರವು ದೇಶದ ‘ಅತಿದೊಡ್ಡ ಮತ್ತು ಸುಂದರವಾದ ಚಲನಚಿತ್ರ ನಗರ’ವನ್ನು ನಿರ್ಮಿಸುತ್ತಿದೆ.ಇಲ್ಲಿ ಬಂಡವಾಳ ಹೂಡಲು ಮುಂಬೈ ನ ಬಾಲಿವುಡ್ ಖ್ಯಾತ ನಟರಿಗೆ ಮತ್ತು ಉದ್ಯಮಿದಾರರಿಗೆ ಪ್ರಯತ್ನಿಸುತ್ತಿದೆ. ಸಿಎಂ ಯೋಗಿ ಯವರು ಮುಂಬೈಯಲ್ಲಿ ಸಭೆ ನಡೆಸಿ ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಲಿದ್ದಾರೆ."
ಉತ್ತರಪ್ರದೇಶ : ರಾಜ್ಯದಲ್ಲಿ ಚಲನಚಿತ್ರ ನಗರವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮನರಂಜನಾ ಉದ್ಯಮದಿಂದ ಹೂಡಿಕೆಗಳನ್ನು ಉತ್ತೇಜಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ
ಈಗ ಅವರು ಮುಂಬೈ ಪ್ರವಾಸದ ಸಮಯದಲ್ಲಿ ಸೆಲೆಬ್ರೆಟಿಗಳನ್ನು ಭೇಟಿಯಾಗಲಿದ್ದಾರೆ. ಮುಂಬೈಗೆ ಭೇಟಿ ನೀಡುವ ಮುನ್ನ ಚಲನಚಿತ್ರೋದ್ಯಮದ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ ಪೂರಕ ಮಾಹಿತಿ ಪಡೆಯಲಿದ್ದಾರೆ.ಈ ಹಿಂದೆ ಯೋಗಿ ಆದಿತ್ಯನಾಥ್ ಸರ್ಕಾರ ಸೆಪ್ಟೆಂಬರ್‌ನಲ್ಲಿ ಲಕ್ನೋದಲ್ಲಿ ಬಾಲಿವುಡ್ ಗಣ್ಯರೊಂದಿಗೆ ಸಭೆ ನಡೆಸಿತ್ತು. ಆ ಸಮಯದಲ್ಲಿ ಅನುಪಮ್ ಖೇರ್ ಮತ್ತು ಉದಿತ್ ನಾರಾಯಣ್ ಹಾಜರಿದ್ದರು.
ಬಾಲಿವುಡ್ ಅಂದ್ರೆ ನೆನಪಾಗೋದು ಮುಂಬೈ. ಆದರೆ ಇದೀಗ ಬಿಜೆಪಿ ಸರ್ಕಾರ ಬಾಲಿವುಡ್‌ನ್ನು ಉತ್ತರ ಪ್ರದೇಶಕ್ಕೆ ಶಿಫ್ಟ್ ಮಾಡೋಕೆ ಹೊರಟಿದೆ .ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮುಂಬೈಗೆ ಭೇಟಿ ನೀಡುವ ಬಗ್ಗೆ ಕಾಂಗ್ರೆಸ್ ಟೀಕಿಸಿದೆ.
ವರದಿಗಳ ಪ್ರಕಾರ, ನಟರಾದ ರಂದೀಪ್ ಹೂಡಾ, ಜಿಮ್ಮಿ ಶೀರ್‌ಗಿಲ್ ಮತ್ತು ಚಲನಚಿತ್ರ ನಿರ್ಮಾಪಕರಾದ ಸುಭಾಷ್ ಘೈ, ರಾಜ್‌ಕುಮಾರ್ ಸಂತೋಶಿ, ಬೋನಿ ಕಪೂರ್, ಭೂಷಣ್ ಕುಮಾರ್, ನೀರಜ್ ಪಾಠಕ್, ಟಿಗ್‌ಮನ್‌ಶು ಧುಲಿಯಾ ಮತ್ತು ವ್ಯಾಪಾರ ವಿಶ್ಲೇಷಕರಾದ ತರಣ್ ಆದರ್ಶ್, ಕೋಮಲ್ ನಹ್ತಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಗೋರಖ್‌ಪುರ ಸಂಸದರು ಮತ್ತು ನಟ ರವಿ ಕಿಶನ್ ಕೂಡ ಸಭೆಯ ಭಾಗವಾಗಲಿದ್ದಾರೆ. ಜೊತೆಗೆ ಉದ್ಯಮಿದಾರರನ್ನು ಸೆಳೆಯಲು ಅವರು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ಭೇಟಿ ನೀಡಲಿದ್ದು, ಲಖನೌ ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೆ ಕೂಡಾ ಮಾತುಕತೆ ನಡೆಸಲಿದ್ದಾರೆ. ತದನಂತರ ಟಾಟಾ, ಎಲ್ ಆಂಡ್ ಟಿ, ಹಿರಾನಂದಾನಿ ಮುಂತಾದ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಕೂಡ ಭೇಟಿ ಮಾಡಲಿದ್ದಾರೆ.
ಮಹಾರಾಷ್ಟ್ರ ಕಾಂಗ್ರೇಸ್ ಕಾರ್ಯದರ್ಶಿ ಮತ್ತು ವಕ್ತಾರ ಸಚಿನ್ ಸಾವಂತ್ ಅವರು ಅಂತಾರಾಷ್ಟ್ರೀಯ ಆರ್ಥಿಕ ಸೇವೆಯನ್ನು ಮುಂಬೈನಿಂದ ಗುಜರಾತ್ ಗೆ ಶಿಫ್ಟ್ ಮಾಡಿದಂತೆ ಉತ್ತರಪ್ರದೇಶದ ಸಿಎಂ ಬಾಲಿವುಡ್ ನ್ನು ಮುಂಬೈನಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.