ಸಂವಿಧಾನ ಕುರಿತ ಬಹುಭಾರತಿ ಕಾವ್ಯ ಬಹುಮಾನ ಸ್ಪರ್ಧೆ....

ಬೆಂಗಳೂರು: ಕವನ ಬರಹಗಾರರಿಗೆ ಅವರ ಸೃಜನಶೀಲ ಬರಹ ಕೌಶಲ್ಯಗಳನ್ನು ಪ್ರದರ್ಶಿಸಲು ಬಹುಭಾರತಿ ಸಾಹಿತ್ಯ ಸಂಘ, ಬೆಂಗಳೂರು ವತಿಯಿಂದ ಬಹುಭಾರತಿ ಕಾವ್ಯ ಬಹುಮಾನ ಸ್ಪರ್ಧೆ ಹೆಸರಿನಲ್ಲಿ ರಾಜ್ಯಮಟ್ಟದ ಕವನ ಸ್ಪರ್ಧೆ ಆಯೋಜಿಸಲಾಗಿದೆ. 

ಈ ಕವನ ಸ್ಪರ್ಧೆಗೆ ‘ಭಾರತದ ಸಂವಿಧಾನ’ ಎಂಬ ವಿಷಯವನ್ನು ನೀಡಲಾಗಿದೆ. ಕವನ ಕಳುಹಿಸಲು ಜನವರಿ 26 ಕೊನೆಯ ದಿನಾಂಕವಾಗಿದೆ. ಕವಿತೆಗಳು ಸ್ವರಚಿತ ಕನ್ನಡ ಕವಿತೆಗಳಾಗಿರಬೇಕು, ಯಾವುದೇ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು. ಒಬ್ಬರು ಒಂದು ಕವಿತೆ ಮಾತ್ರ ಕಳಿಸಬಹುದು.

ಅನುವಾದ ಅಥವಾ ಭಾಷಾಂತರವಾದ ಕವಿತೆಗಳನ್ನು ಸ್ವೀಕರಿಸಲಾಗುವುದಿಲ್ಲ. ಕವಿತೆಗಳನ್ನು ಕಳುಹಿಸುವಾಗ ತಪ್ಪದೇ ಶೀರ್ಷಿಕೆಯನ್ನು ನಮೂದಿಸಿರಬೇಕು ಮತ್ತು ನಿಮ್ಮ ಸ್ವವಿವರವನ್ನು ಕವಿತೆಯ ಶೀರ್ಷಿಕೆಯ ಜೊತೆಗೆ ಬೇರೊಂದು ಪುಟದಲ್ಲಿ ಬರೆದು ಕಳುಹಿಸಬೇಕು. ಕವಿತೆಯ ಪುಟದಲ್ಲಿ ನಿಮ್ಮ ಹೆಸರು ಬರೆದಿರಬಾರದು, ಪರಿಚಯ ಪುಟ ಮತ್ತು ಕವಿತೆ ಎರಡೂ ಬೇರೆ ಬೇರೆ ಪುಟದಲ್ಲಿರಬೇಕು. ಅತ್ಯುತ್ತಮ ಕವಿತೆಗಳನ್ನು ಸಂಕಲನ ರೂಪದಲ್ಲಿ ತರಲಾಗುವುದು.

ಸ್ಪರ್ಧೆಯಲ್ಲಿ ವಿಜಯಶಾಲಿಯಾದವರಿಗೆ  ಪ್ರಥಮ ಬಹುಮಾನ 10,000, ದ್ವಿತೀಯ ಬಹುಮಾನ 5,000, ತೃತೀಯ ಬಹುಮಾನ 3,000 ರೂಪಾಯಿಗಳು ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ 7 ಕವಿತೆಗಳಿಗೆ ತಲಾ 1,000 ಜೊತೆಗೆ ಪ್ರಶಸ್ತಿಗೆ ಆಯ್ಕೆಯಾಗುವ ಎಲ್ಲರಿಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.‌

ಆಸಕ್ತರು ಕವನಗಳನ್ನು,  ಬಹುಭಾರತಿ ಸಾಹಿತ್ಯ ಸಂಘ, ಡಾ.ರವಿ ಅಪ್ಪಗೆರೆ c/0 ನಂಜುಂಡಸ್ವಾಮಿ, #10, 1ನೇ ಅಡ್ಡರಸ್ತೆ, 1ನೇ ‘ಬಿ’ ರಸ್ತೆ, ಡಾಕ್ಟರ್ಸ್ ಕಾಲೋನಿ, ಕೋಣನಕುಂಟೆ, ಬೆಂಗಳೂರು 62 ಇಲ್ಲಿಗೆ ಅಂಚೆ ಮೂಲಕ ಕಳುಹಿಸಬಹುದು. ಅಥವಾ bahubharathiss@gmail.com ಇ-ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9743124519, 9980116699 ಅಥವಾ 9008201755 ಕರೆ ಮಾಡಬಹುದು.