ಸಿಗರೇಟ್, ತಂಬಾಕು ಸೇವನೆಯ ವಯೋಮಿತಿ 21 ವರ್ಷಕ್ಕೆ ಹೆಚ್ಚಿಸುವ ಚಿಂತನೆ: ಕೇಂದ್ರ ಸಚಿವಾಲಯ...

ಉಪಸಮಿತಿಯ ಶಿಫಾರಸಿನ ಮೇರೆಗೆ, ಸಿಗರೇಟ್ ಹಾಗು ತಂಬಾಕು ಸೇವನೆಯ ವಯೋಮಿತಿಯನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸಿದೆ.

ಸಚಿವಾಲಯವು ತಂಬಾಕು ಮತ್ತು ಸಿಗರೇಟ್ ನಿಯಂತ್ರಣ ಕುರಿತು ಸಲಹೆ ಬಯಸಿ ಉಪಸಮಿತಿಯೊಂದನ್ನು ರಚಿಸಿತ್ತು. ಇತ್ತೀಚೆಗೆ ಉಪಸಮಿತಿಯು ತಮ್ಮ ಸಲಹೆಯನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಿಗರೇಟ್ ಹಾಗೂ ತಂಬಾಕು ಸೇವನೆಯ ವಯೋಮಿತಿಯನ್ನು 21ಕ್ಕೆ ಹೆಚ್ಚಿಸುಲು ಹಾಗೂ ಧೂಮಪಾನ ನಿಷೇಧಿತ ಸ್ಥಳಗಳಲ್ಲಿ ಧೂಮಪಾನ ಮಾಡಿದವರಿಗೆ ಹಾಲಿ ಇರುವ 200ರೂ ದಂಡವನ್ನು ಹೆಚ್ಚಿಸುವಂತೆ ಉಪಸಮಿತಿಯು ಸಚಿವಾಲಯಕ್ಕೆ ಸಲಹೆ ನೀಡಿದೆ.

ಸಿಗರೇಟ್ ಹಾಗೂ ಧೂಮಪಾನ ಮಾಡಲು ಹಾಲಿ ಇರುವ ವಯೋಮಿತಿ 18 ವರ್ಷ ಆಗಿದ್ದು, ಈಗ ವಯೋಮಿತಿಯನ್ನು ಹೆಚ್ಚಿಸುವ  ಉಪಸಮಿತಿಯ ಸಲಹೆಯು ಜಾರಿಗೆ ಬಂದರೆ 21ವರ್ಷಕ್ಕೂ ಕಡಿಮೆ ವಯಸ್ಸಿನವರು ಧೂಮಪಾನ ಮಾಡುವಂತಿಲ್ಲ.