ತಾವರಗೇರಾ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ಪವಿತ್ರ ಇರಮುಡಿ ಕಾರ್ಯಕ್ರಮ....

ತಾವರಗೇರಾ ನಗರದಲ್ಲಿ ಶ್ರೀ ವೀರೇಶ್ವರ ಕಲ್ಯಾಣ ಮಂಟಪದಲ್ಲಿ ತ್ರಿಲೋಕ ವಂದಿತ ಭಗವಾನ್ ಶ್ರೀ ಅಯ್ಯಪ್ಪ ಸ್ವಾಮಿಯ ಪವಿತ್ರ ಇರುಮುಡಿ ಕಾರ್ಯಕ್ರಮವು ಬೆಳಗ್ಗೆ ೪-೩೦ ಗಂಟೆಗೆ ಗಣಪತಿ,೫-೧೫ ಕ್ಕೆ ಸುಬ್ರಹ್ಮಣ್ಯಂ ಸ್ವಾಮಿ ಪೂಜೆ,೬-೧೫ ಕ್ಕೆ ತುಪ್ಪದ ಕಾಯಿ ತುಂಬುವ ಇರುಮುಡಿ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು ಹಾಗೂ ೧-೩೦ ಕ್ಕೆ ಅನ್ನಸಂತರ್ಪಣೆ (ಮಹಾ ಪ್ರಸಾದ) ವಿತರಿಸಲಾಯಿತು.ನಂತರ ಸಾಯಂಕಾಲ ೬ ಗಂಟೆಗೆ ಇರುಮುಡಿ ಪೂಜೆ ಮತ್ತು ಪವಿತ್ರವಾದ ೧೮ ಮೆಟ್ಟಿಲುಗಳ ಪೂಜೆ ನಂತರ ನಗರದಲ್ಲಿ ಮೂಖ್ಯ ಬೀದಿ ಬೀದಿಗಳಲ್ಲಿ ಸಂಚರಿಸಿ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಶಬರಿಮಲೆ ಯಾತ್ರೆಯನ್ನು ಶ್ರೀ ನಾರಾಯಣ ಎಚ್.ಬುಜರಕರ್ ಗುರುಸ್ವಾಮಿಗಳ ಇವರ ನೇತೃತ್ವದಲ್ಲಿ ಕೈಗೂಂಡರು.ಈ ಸಂದರ್ಭದಲ್ಲಿ ಊರಿನ ಗುರು ಹಿರಿಯರು, ಸಂಘ ಸಂಸ್ಥೆಯ ಮುಖ್ಯಸ್ಥರು, ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ರಿ)ಯ ಭಕ್ತರು ಮತ್ತು ಸಕಲ ಸದ್ಭಕ್ತರು ಭಾಗವಹಿಸಿದ್ದರು. 

ವರದಿಗಾರರು : ಶರಣಪ್ಪ ಕುಂಬಾರ ತಾವರಗೇರಾ