ತಂಡದಲ್ಲಿ ನಾನು ಎಂಬ ಪದ ಇಲ್ಲ ನಾವು; ಕೋಚ್ ರವಿಶಾಸ್ತ್ರಿ

ತಂಡದಲ್ಲಿ ನಾನು ಎಂಬ ಪದ ಇಲ್ಲ ನಾವು; ಕೋಚ್ ರವಿಶಾಸ್ತ್ರಿ

ಇಬ್ಬರು ಯಶಸ್ಸು ಗಳಿಸಿದಾಗ ಎಲ್ಲರು ಅವರನ್ನು ಅಭಿನಂದಿಸುತ್ತಾರೆ, ಇದು ತಂಡದ ಗೆಲುವು ಎಂದು. ನಮ್ಮ ನಿಘಂಟಿನಲ್ಲಿ 'ನಾನು' ಎಂಬ ಪದ ಇಲ್ಲ. ಅದು 'ನಾವು'ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

ಲೋಕೇಶ್ ರಾಹುಲ್ ಅವರನ್ನು ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಲು ತಂಡದ ನಿಲುವಿನ ಬಗ್ಗೆ ಬಲವಾಗಿ ಸಮರ್ಥಿಸಿಕೊಂಡಿರುವ ಟೀಮ್ ಇಂಡಿಯಾದ ಪ್ರಧಾನ ಕೋಚ್ ರವಿ ಶಾಸ್ತ್ರಿ ಅವರು ತಂಡದ ಅಗತ್ಯಗಳಿಗಾಗಿ ನಾವು ಆಯ್ಕೆಗಳನ್ನು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ.

ಟಾಸ್ ಗೆಲುವು ನಿರ್ಣಾಯಕವಲ್ಲ,ನಾವು ಪ್ರತಿಯೊಂದು ತಂಡಗಳ ವಿರುದ್ದ ವಿಭಿನ್ನ ಪರಿಸ್ಥಿತಿಯಲ್ಲಿ ಚೆನ್ನಾಗಿ ಆಡುತ್ತಿದ್ದೇವೆ. ನಮ್ಮ ಮುಂದಿನ ಗುರಿ ವಿಶ್ವಕಪ್ ಗೆಲ್ಲುವುದಾಗಿದೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತವು ಐದು ಟ್ವೆಂಟಿ-20  ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಜನವರಿ 24ರಿಂದ ಸೀಮಿತ ಓವರ್‌ಗಳ ಸರಣಿ ಆರಂಭವಾಗಲಿದೆ ಎಂದು ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಹೊರಡುವ ಮುನ್ನ ಹೇಳಿದರು.