
ಪತ್ರಕರ್ತರ ಸೋಗಿನಲ್ಲಿ ಮಂಗಳೂರಿಗೆ ಬಂದಿದ್ದ 50 ಮಂದಿ ಪೊಲೀಸ್ ವಶಕ್ಕೆ.
ಮಂಗಳೂರು:- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆದಿದ್ದು, ಮಂಗಳೂರಿನಲ್ಲಿ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಕಲ್ಲು ತೂರಾಟ ನಡೆಸುತ್ತಿದ್ದವರನ್ನು ಚದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ.
ಇದೀಗ ಮಂಗಳೂರು ಕಮೀಷನರೆಟ್ ವ್ಯಾಪ್ತಿಯಲ್ಲಿ ಭಾನುವಾರದವರೆಗೆ ಕರ್ಪ್ಯೂ ಜಾರಿಗೊಳಿಸಲಾಗಿದ್ದು, ಶಾಲಾ - ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ. ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ದೇಹಗಳನ್ನು ಈಗ ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇದರ ಮಧ್ಯೆ ಕೇರಳ ಮೂಲದ 50 ಮಂದಿ, ಪತ್ರಕರ್ತರ ಸೋಗಿನಲ್ಲಿ ಆಸ್ಪತ್ರೆ ಬಳಿ ಅಡ್ಡಾಡುತ್ತಿದ್ದರೆಂದು ಹೇಳಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಇವರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಗುಂಪಿನಲ್ಲಿದ್ದ ಕೆಲವರ ಬಳಿ ಮಾರಕಾಸ್ತ್ರಗಳಿದ್ದವೆಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಈ ಗುಂಪಿನಲ್ಲಿದ್ದ ಕೆಲವರ ಬಳಿ ಮಾರಕಾಸ್ತ್ರಗಳಿದ್ದವೆಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.