ಬೆಂಗಳೂರು ಗಲಭೆ : 17 ಎಸ್‌ಡಿಪಿಐ, ಪಿಎಪ್ಐ ಕಾರ್ಯಕರ್ತರನ್ನು ಬಂಧಿಸಿದ ಎನ್ಐಎ

ಬೆಂಗಳೂರಿನ ಕೆಜೆ ಹಳ್ಳಿ- ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸದಂತೆ ಸೊಷಿಯಲ್‌ ಡೆಮೊಕ್ರೆಟಿಕ್‌ ಪಾರ್ಟಿ ಆಫ್ ಇಂಡಿಯಾ (SDPI ) ಮತ್ತು ಪೊಪುಲರ್‌ ಫ್ರಂಟ ಆಫ್ ಇಂಡಿಯಾದ  (PFI) 17 ಕಾರ್ಯಕರ್ತರನ್ನು ರಾಷ್ಟ್ರಿಯ ತನಖಾ ದಳ (ಎನ್ಐಎ - NIA) ಬಂಧಿಸಿದೆ. ಈ ಬಗ್ಗೆ ಎನ್ಐಎ ಅಧಿಕೃತ ಪ್ರಕಟಣೆ ಹೊರಡಿಸಿದೆ. ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯ ಫೆಸ್‌ಬುಕ್ ಪೋಸ್ಟನ ವಿಚಾರವಾಗಿ ಬೆಂಗಳೂರಿನಲ್ಲಿ ಗಲಭೆಯಾಗಿತ್ತು. ಈ ಗಲಭೆಯಲ್ಲಿ  ಭಾಗಿಯಾಗಿ ಹಿಂಸಾಚಾರ ನಡೆಸಲು ಸಂಚು ರೂಪಿಸಿದ್ದ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.‌

ಎನ್ಐಎ ವರದಿಯ ಪ್ರಕಾರ ಎಸ್‌ಡಿಪಿಆಯ್ ಲೀಡರ್‌ ಮೊಹಮ್ಮದ್‌ ಶರೀಫ್‌, ಇಮ್ರಾನ್‌ ಅಹಮದ್‌ ಮತ್ತು ರುಬಾ ವಕಾಸ್, ಶಬ್ಬಾರ್‌ ಖಾನ್‌, ಶೇಕ್‌ ಅಜ್ಮಲ್‌ ಹಾಗೂ ಇತರರು ಸೇರಿಕೊಂಡು  ಅಗಸ್ಟ ಹನ್ನೊಂದರಂದು  ಥಣಿಸಂದ್ರ ಮತ್ತು ಕೆಜೆಹಳ್ಳಿ ವಾರ್ಡಗಳಲ್ಲಿ ಸಭೆ ನಡೆಸಿದ್ದರು. ಇವರೆಲ್ಲರೂ ಸೇರಿಕೊಂಡು ಗಲಭೆ ನಡೆಸುವಂತೆ ಜನರನ್ನು ಹುರಿದುಂಬಿಸಿದ್ದರು. ಅಲ್ಲದೇ  ಕೆಜೆಹಳ್ಳಿ ಪೋಲಿಸ ಠಾಣೆಯ ದಾಳಿಯ ಮುಂದಾಳತ್ವವವನ್ನು ವಹಿಸಿದ್ದರು ಎಂದು ವರದಿ ಹೇಳಿದೆ. ಈ ಗಲಭೆಯಿಂದ ಜನರಿಗಾದ ಅಪಾರ ನಷ್ಟಗಳ ಬಗ್ಗೆಯೂ ಎನ್ಐಎ ವರದಿ ಮಾಡಿದೆ.

ಇನ್ನೂ ಗಲಭೆ ನಡೆಸುವಂತೆ. ಫೆಸ್‌ಬುಕ್‌, ವಾಟ್ಸಪ್‌ ಮತ್ತು ಇನ್‌ಸ್ಟಾಗ್ರಾಂಗಳಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮಾಹಿತಿ ಹರಿಬಿಡಲಾಗಿತ್ತು. ಬಂಧಿತ ಸದ್ದಾಮ್‌, ಸಯ್ಯದ್ ಸೋಹೆಲ್,‌ ಖಲಿಮುಲ್ಲಾ ಅಲಿಯಾಸ್‌ ಶಾರುಖಾನ್‌ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಇವರೆಲ್ಲರು ಗಲಭೆಯಲ್ಲಿ ಭಾಗಿಯಾಗಿದ್ದಾರೆ  ಅಲ್ಲದೇ ಜನರನ್ನು ಪೋಲಿಸ ಠಾಣೆಯ ಬಳಿ ಸೇರುವಂತೆ ಪ್ರಚೋದಿಸಿದ್ದಾರೆ ಎಂದು ಎನ್ಐಎ ಹೇಳಿದೆ.

ವರದಿ: ಮಂಜುನಾಥ್‌ ನಾಯಕ್