ಇಂಡೋ-ಪಾಕ್ ಯುದ್ಧಕ್ಕೆ 50 ವರ್ಷ: ದೇಶದಾದ್ಯಂತ ‘ಸ್ವರ್ನಿಮ್ ವಿಜಯ ವರ್ಷ’ ಆಚರಣೆ

1971ರ ಪಾಕಿಸ್ತಾನ – ಭಾರತ ಯುದ್ಧವಾಗಿ 50 ವರ್ಷಗಳು ಕಳೆದಿವೆ. 1971ರ  ಇಂಡೋ-ಪಾಕ್‌  ಯುದ್ಧವು ಬಾಂಗ್ಲಾದೇಶ ವಿಮೋಚನೆಗೆ ದಾರಿಯಾಗಿತ್ತು. ಈ ಯುದ್ಧದಲ್ಲಿ ­­ಪಾಕಿಸ್ತಾನ ವಿರುದ್ಧದ ಭಾರತದ ವಿಜಯದ ನೆನಪಿಗಾಗಿ ರಾಷ್ಟ್ರದಲ್ಲಿ ಇಂದು ವಿಜಯ ದಿವಸ್‌ನ್ನು ಆಚರಿಸಲಾಗುತ್ತದೆ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ದೇಶದಾದ್ಯಂತ ಗೌರವ ಸೂಚಿಸಲಾಗುತ್ತದೆ.‌


ಈ ಗೆಲುವಿನ 50ನೇ ವರ್ಷದ ನೆನಪಿನಲ್ಲಿ ಬಾರತ ಇಂದು ʼಸ್ವರ್ನಿಮ್‌ ವಿಜಯ ವರ್ಷʼ ವನ್ನು ಆಚರಿಸುತ್ತಿದೆ. ಭಾರತೀಯ ಸೇನೆಯ ಎಡಿಜಿಪಿಆಯ್ (ADGPI) 1971ರ ಯುದ್ಧದ ಹಿರೋ ಫಿಲ್ಡ ಮಾರ್ಶಲ್‌  ಮಾನೆಕ್‌ ಶಾ ಯದ್ಧ ಸಂದರ್ಭದಲ್ಲಿ ಸೈನಿಕರ ಜೊತೆಗಿರುವ ಚಿತ್ರ ಟ್ಟೀಟ್‌ ಮಾಡಿದ್ದಾರೆ. ಜೊತೆಗೆ ಶಿರ್ಷೀಕೆಯಲಿ 1971  ಡಿಸೆಂಬರ್‌ 13 ರಂದು  ಮಾನೆಕ್‌ ಶಾ ಹೇಳಿದ್ದ ʼಶರಣಾಗಿ ಇಲ್ಲದಿದ್ದರೆ ನಿಮ್ಮನ್ನು ಮುಗಿಸಿಬಿಡುತ್ತೇವೆʼ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ.


ಈ ಹಿನ್ನಲೆಯಲಿ ಇಂದು ಬೆಳಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಕ್ಷಣಾ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಯುದ್ಧದಲ್ಲಿ ಮಡಿದ  ಸಮರ್ಪಿಸಿದ್ದಾರೆ.

1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ಥಾನದ ಭಾಗವಾಗಿತ್ತು. ಬಾಂಗ್ಲಾದೇಶವನ್ನು ಪೂರ್ವ ಪಾಕಿಸ್ತಾನ ಎಂದು ಕರೆಯುತ್ತಿದ್ದರು. ಆದರೆ ಪೂರ್ವ ಪಾಕಿಸ್ತಾನದಲ್ಲಿಅಲ್ಲಿನ ಸೇನಾ ಪಡೆ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಇದರಿಂದ ತೊಂದರೆಗೊಳಗಾದ ಸಾವಿರಾರು ಜನರು ಆಶ್ರಯ ಅರಸಿಕೊಂಡು ಭಾರತಕ್ಕೆ ಅಕ್ರಮವಾಗಿ ನುಸುಳಿದ್ದರು.

ಪೂರ್ವ ಪಾಕಿಸ್ತಾನದಲ್ಲಿ ಪಾಕ್‌ ನಡೆಸುತ್ತಿದ್ದ ಕೃತ್ಯಗಳನ್ನು ವಿರೋಧಿಸಿದ್ದ ಭಾರತ ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿತ್ತು. ಬಂಗಾಲದಲ್ಲಿ ನೆಲೆಸಿದ್ದ ಮುಸ್ಲಿಮ್‌ ಹಾಗೂ ಹಿಂದೂಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪಾಕ್‌ ವಿರುದ್ದ ಸಮರ ಸಾರುವುದಾಗಿ 1971  ಡಿಸೆಂಬರ್‌ 3 ರಂದು ಭಾರತ ನಿರ್ಧಾರ ಕೈಗೊಂಡಿತ್ತು. 13 ದಿನಗಳ ಕಾಲ ನಡೆದ ಭಾರತ –ಪಾಕ್‌ ಯುದ್ಧದಲ್ಲಿ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರಿತ್ತು.  ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ ಬಳಿಕ ಪೂರ್ವ ಪಾಕಿಸ್ತಾನ ವೀಮೋಚನೆಗೊಂಡು ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರ ರೂಪುಗೊಂಡಿತ್ತು.

ವರದಿ: ಮಂಜುನಾಥ್‌ ನಾಯಕ್