ಟಿಅರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಸಿಇಒ ವಿಕಾಸ್ ಖಂಚನ್‌ದಾನಿ ನ್ಯಾಯಾಂಗ ಬಂಧನ
ಮುಂಬೈ: ಟಿಆರ್‌ಪಿ ಮ್ಯಾನಿಪುಲೇಷನ್ ಹಗರಣದಲ್ಲಿ ದೇಶದ ಪ್ರತಿಷ್ಟಿತ ಸುದ್ದಿ ಟಿವಿ ರಿಪಬ್ಲಿಕನ್ ಸಿಇಒ ವಿಕಾಸ್ ಖಂಚನ್‌ದಾನಿ ಬಂಧನವಾಗಿತ್ತು. ಪೋಲಿಸರು ನ್ಯಾಯಾಲದ ಮುಂದೆ ವಿಕಾಸರನ್ನು ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿಕಾಸ್ ಬೇಲ್ ವಿಚಾರಣೆಯನ್ನು ನ್ಯಾಯಾಲಯ ಬುಧವಾರ ನಡೆಸಲಿದೆ.
ʼಅಧಿಕಾರ ಮತ್ತು ನ್ಯಾಯಾಂಗದ ದುರುಪಯೋಗ ಮಾಡಿ ವಿಕಾಸ್‌ರನ್ನು ಬಂಧನ ಮಾಡಲಾಗಿದೆ. ಎಫ್‌ಐಆರ್ ಮತ್ತು ಚಾರ್ಜಶೀಟ್‌ನಲ್ಲೂ ಕೂಡ ವಿಕಾಸ್ ಹೆಸರಿಲ್ಲ. ಈ ವಿಷಯಗಳನ್ನು ಮುಂದಿಟ್ಟುಕೊಂಡು ನಾವು ಬೇಲ್‌ಗೆ ಅರ್ಜಿ ಹಾಕಿದ್ದೇವೆʼಎಂದು ವಿಕಾಸ್ ಪರ ವಕೀಲ ನೀತಿನ ಪ್ರಧಾನ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ರಿಪಬ್ಲಿಕನ್ ಮಾತೃ ಸಂಸ್ಥೆಯಾದ ARG Outlier Media Private ltd ನ ಹಣಕಾಸು ಅಧಿಕಾರಿ ಎಸ್ ಸುಂದರಾಮ್ ಬಂಧನವಾಗಿತ್ತು. ನೀರಿಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ, ಡಿಸೆಂಬರ್ 21ಕ್ಕೆ ಮತ್ತೆ ಕೇಸ್‌ನ ವಿಚಾರಣೆ ನಡೆಯಲಿದೆ, ಅಲ್ಲಿಯವರೆಗೆ ಎಸ್ ಸುಂದರಾಮ್ ಮೇಲೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಆದೇಶ ನೀಡಲಾಗಿತ್ತು.
ʼಕಳೆದ ವಾರ ವಿಕಾಸ ಖಂಚನ್‌ದಾನಿರನ್ನು ಬಂಧಿಸಲಾಗಿತ್ತು. ಇವರ ಬಂಧನ ವೇಳೆ ನ್ಯಾಯಾಲಯದಲ್ಲಿ ನೀರಿಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇತ್ತು. ಇದರ ಹೊರತಾಗಿಯೂ ವಿಕಾಸರನ್ನು ಪೋಲಿಸರು ಅವಸರ ಮಾಡಿ ಬಂಧಿಸಿದ್ದರು. ಈ ಬಗ್ಗೆ ಸೆಷನ್ಸ ನ್ಯಾಯಾಲಯ ಕೂಡ ಪೋಲಿಸರ ನಡೆಯನ್ನು ಪ್ರಶ್ನಿಸಿದೆ ಎಂದು ವಿಕಾಸ ಪರ ವಕೀಲ ನೀತಿನ ಪ್ರಧಾನ್ ಹೇಳಿದ್ದಾರೆ.
ವರದಿ: ಮಂಜುನಾಥ್ ನಾಯಕ್