ಕೊನೆಗೂ ಶರಣಾದ ಮಂಗಳೂರು ಬಾಂಬರ್
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯ ರಾವ್ ಎಂಬತನು ಬೆಂಗಳೂರು ನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.
ಟೊಪ್ಪಿ ಧರಿಸಿದ್ದ ಶಂಕಿತ ವ್ಯಕ್ತಿಯ ಓಡಾಟದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯ ಸ್ಕೆಚ್ ತಯಾರಿಸಲಾಗಿತ್ತು. ಶಂಕಿತ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಆದಿತ್ಯರಾವ್ ಸ್ವತಃ ಪೊಲೀಸರಿಗೆ ಶರಣಾಗಿದ್ದಾನ.
ಈತನೇ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿದ್ದಾನೆ ಎಂದು ಪೊಲೀಸರಿಗೆ ಮೊದಲೇ ಸಾಕಷ್ಟು ಅನುಮಾನಗಳಿದ್ದವು. ಈ ಸಂಬಂಧ ಮಂಗಳೂರು ಪೊಲೀಸರು, ಉಡುಪಿ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದರು. ಇದೀಗ ಬಂಧಿತನಾಗಿರೋ ಆದಿತ್ಯ ರಾವ್ಗೂ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರೋ ವ್ಯಕ್ತಿಗೂ ಸಾಕಷ್ಟು ಸಾಮ್ಯತೆಗಳಿವೆ. ಆರೋಪಿ ಆದಿತ್ಯ ರಾವ್ ಈ ಹಿಂದೆಯೂ ಹುಸಿ ಬಾಂಬ್ ಕರೆ ಮಾಡಿ ಬಂಧಿತನಾಗಿದ್ದ.
=======