ಸಿಎಎ ವಿರೋಧಿಸಿ ಸಾವಿರಾರು ಮುಸ್ಲಿಂ ಮಹಿಳೆಯರ ಪ್ರತಿಭಟನೆ
ಬೆಂಗಳೂರು: ಗೋರಿಪಾಳ್ಯದ ಈದ್ಗಾ ಮೈದಾನದಲ್ಲಿ ಸಿಎಎ ಹಾಗೂ ಎನ್.ಆರ್.ಸಿ ಯನ್ನು ವಿರೋಧಿಸಿ ಶಾಸಕ ಜಮೀರ್ ಅಹಮದ್ ನೆತೃತ್ವದಲ್ಲಿ ಸಾವಿರಾರು ಮುಸ್ಲಿಂ ಮಹಿಳೆಯರು ಬೃಹತ್ ಪ್ರತಿಭಟನೆಯನನು ನಡೆಸಿದ್ರು.
ನೋ ಸಿಎಎ ಹಾಗೂ ನೋ ಎನ್.ಆರ್.ಸಿ ಎಂದು ಬರೆದಿರುವ ಭಿತ್ತಿಪತ್ರವನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೋರಹಾಕಿದರು. ಬಿಜೆಪಿ ಸರ್ಕಾರ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ. ನಮಗೆ ಸ್ವಾತಂತ್ರ್ಯ ಬೇಕು ಈ ಸರ್ಕಾರ ಬಂದಗಿನಿಂದಲೂ ನಮ್ಮ ಸಮುದಾಯದಕ್ಕೆ ತಾರತಮ್ಯ ಮಾಡುತ್ತಲೇ ಇದೆ. ಸಂವಿಧಾನದ ಪ್ರಕಾರ ಸರ್ವರನ್ನು ಸಮಾನವಾಗಿ ಕಾಣಬೇಕು ಎಂದು ಎಚ್ಚರಿಕೆ ನೀಡಿದರು. ಈ ಜನವಿರೋಧಿ ಸಿಎಎ ಮತ್ತು ಎನ್.ಆರ್.ಸಿಯನ್ನು ರದ್ದುಗೊಳಿಸಬೇಕಾಗಿ ಆಗ್ರಹ ಮಾಡಿದರು.