ಕ್ರಿಕೆಟ್ ಇತಿಹಾಸ....!
Almanews24,ಬೆಂಗಳೂರು,ಡಿ13: ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿಲ್ಲದ ಕ್ರಿಕೆಟ್ ನ ಇತಿಹಾಸದ ಕಿರು-ಪರಿಚಯ. 1844 ರಲ್ಲಿ ಕ್ರಿಕೆಟ್‌ನ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಡಲಾಯಿತು. ಆದರೆ ಕ್ರಿಕೆಟ್ ನ ಅಧಿಕೃತ ಇತಿಹಾಸವು 1877 ರಲ್ಲಿ ಆರಂಭವಾಗುತ್ತದೆ. ಇದೇ ಸಮಯದಲ್ಲಿ ಇಂಗ್ಲೆಂಡ್ ದೇಶದಲ್ಲಿ ಕ್ರಿಕೆಟ್ ಜನ್ಮತಾಳಿತು.
ಮೊದಲು ಕ್ರಿಕೆಟ್ ಆಡಿದವರು....!
ಮೊದಲು ಕ್ರಿಕೆಟ್ ಆಡಿದ್ದು ಯಾರು ಯಾವಾಗ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ದೊರೆತಿರುವ ಮಾಹಿತಿ ಪ್ರಕಾರ ಆಗ್ನೇಯ ಇಂಗ್ಲೆಂಡ್ ನ ಅರಣ್ಯ ಭಾಗದಲ್ಲಿ ವೆಲ್ಡಾನ್ ಕೆಂಟ್ ಮತ್ತು ಸಸೆಕ್ಸ್ ಪ್ರಾಂತ್ಯದಲ್ಲಿ ನೆಲಸಿದ್ದ ಸ್ಯಾಕ್ಸನ್ ಅಥವಾ ನಾರ್ಮನ್ ಎಂಬ ಜನಾಂಗದ ಮಕ್ಕಳು ಕ್ರಿಕೆಟ್ ಹೋಲುವ ಆಟ ಆಡುತ್ತಿದ್ದರು ಎಂಬುದು ತಿಳಿದುಬರುತ್ತದೆ.
18ನೇ ಶತಮಾನದಲ್ಲಿ ಜೂಜುಕೋರರಿಂದ ಕ್ರಿಕೆಟ್ ಪೋಷಣೆ....!
ಇದು ಅಚ್ಚರಿ ಆದರೂ ಸತ್ಯ..
ಕ್ರಿಕೆಟ್ ನ ಪ್ರಥಮ ಆಶ್ರಯದಾತರೇ ಜೂಜುಕೋರರು. ತಮ್ಮ ಸ್ವಂತ ತಂಡಗಳಿಂದ ತಮ್ಮ ಸಾಮರ್ಥ್ಯಗಳನ್ನು ಬಲಗೊಳಿಸಲು ನಿರ್ಧರಿಸಿದರು ಮತ್ತು ಅದನ್ನು ಪ್ರಥಮ ಕೌಂಟಿ ತಂಡಗಳು ಎಂದು ಕರೆದರು.1725 ರಲ್ಲಿ ಕ್ರಿಯಾಶೀಲರಾಗಿರುವ ಶ್ರೀಮಂತರ ಗುಂಪು ಮತ್ತು ವ್ಯಾಪಾರಿ ವ್ಯಕ್ತಿಗಳ ಇದಕ್ಕೆ ತಮ್ಮ ಬೆಂಬಲ ನೀಡಿದರು.
19ನೇ ಶತಮಾನದ ಕ್ರಿಕೆಟ್....!
ಮೊದಲಬಾರಿಗೆ ಕೌಂಟಿ ಕ್ಲಬ್ ಗಳ ರಚನೆಯೊಂದಿಗೆ ಕ್ರಿಕೆಟ್ ಸಂರಚನೆಯಲ್ಲಿ ಮೂಲಭೂತ ಬದಲಾವಣೆಯಾಯಿತು.ಈ ಶತಮಾನದಲ್ಲಿ ಕ್ರಿಕೆಟ್ ಬೆಳವಣಿಗೆಯು ರೈಲ್ವೇನೆಟ್ ವರ್ಕ್ ನ ಅಭಿವೃದ್ಧಿಯಿಂದ ಬೆಂಬಲಿಸಲ್ಪಟ್ಟಿತ್ತು.ಇದರಿಂದ ತಂಡಗಳು ಪ್ರಯಾಣ ಮಾಡುವುದು ಮತ್ತು ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು.
20ನೇ ಶತಮಾನದ ಕ್ರಿಕೆಟ್.....!
1909ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ ನಡೆದಾಗ ಕೇವಲ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳು ಮಾತ್ರ ಸದಸ್ಯ ತಂಡಗಳಾಗಿದ್ದವು. ಎರಡನೇ ವಿಶ್ವ ಯುದ್ಧ ನಡೆಯುವ ಮುನ್ನ ಭಾರತ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಟೆಸ್ಟ್ ಆಡುವ ದೇಶಗಳ ಸಾಲಿಗೆ ಸೇರಿದವು. ನಂತರ ಪಾಕಿಸ್ತಾನ, ಶ್ರೀಲಂಕಾ, ಜಿಂಬಾಂಬೆ, ಬಾಂಗ್ಲಾದೇಶಗಳು ಈ ಪಟ್ಟಿಗೆ ಸೇರಿದವು.
21ನೇ ಶತಮಾನದ ಕ್ರಿಕೆಟ್.....!
ಈ ಶತಮಾನದ 2001ರ ಜೂನ್ ನಲ್ಲಿ ಐಸಿಸಿಯು ಟೆಸ್ಟ್ ಚಾಂಪಿಯನ್ ಶಿಪ್ ಟೇಬಲ್ ಮತ್ತು ಅಕ್ಟೋಬರ್ 2002ರಲ್ಲಿ ಒನ್ ಡೇ ಇಂಟರ್ನ್ಯಾಷನಲ್ ಚಾಂಪಿಯನ್ ಶಿಪ್ ಟೇಬಲ್ ಗಳನ್ನು ಪರಿಚಯಿಸಿತು.2004ರಲ್ಲಿ ಐಸಿಸಿ ಇಂಟರ್ನ್ಯಾಷನಲ್ ಕಪ್ ಪ್ರಪ್ರಥಮ ಬಾರಿಗೆ 12 ರಾಷ್ಟ್ರಗಳಿಗೆ ಪ್ರಥಮ ವರ್ಗದ ಕ್ರಿಕೆಟನ್ನು ಪರಿಚಯಿಸಿತು. ಮತ್ತು ಇತ್ತೀಚೆಗೆ ಸಂಜೆಯ ಮನೋರಂಜನೆಗೆ ಅವಶ್ಯಕವಾದ ಟ್ವೆಂಟಿ-20 ಕ್ರಿಕೆಟ್ ನ ಅತ್ಯಂತ ಹೊಸದಾದ ಕಲ್ಪನೆಯಾಗಿ ಅಸ್ತಿತ್ವಕ್ಕೆ ಬಂದಿತು.