ವಾಯುಮಾಲಿನ್ಯಕ್ಕೆ ತತ್ತರಿಸಿರುವ ಮಹಾನಗರಿಗಳು : ಶುದ್ಧಗಾಳಿ ಈಗ ಮನೆಗಂಳದಲ್ಲಿ
ನಾಡು ಬೆಳೆಯುತಿದ್ದಂತೆ ಕಾಡು ನಾಶವಗುತ್ತಿದೆ. ಕೈ ತೋಟಕ್ಕೂ ಜಾಗ ಬಿಡದೆ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದರ ಪರಿಣಾಮ ಶುದ್ಧವಾದ ಗಾಳಿಗೂ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ವಾಯುಮಾಲಿನ್ಯದಿಂದ ತತ್ತರಿಸುತ್ತಿರು ರಾಷ್ಟ್ರ ರಾಜಧಾನಿ ದೆಹಲಿ ಇದಕ್ಕೆ ಜ್ವಲಂತ ಉದಾಹರಣೆ. ಆದರೆ ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಗಾರ್ಡನ್ ಸಿಟಿ ಬೆಂಗಳೂರು ಕೂಡಾ ಇದಕ್ಕೆ ಹೊರತಾಗಿರದು. ಬೆಂಗಳೂರಿಗರೂ ಕಾಡಾ ಮಾಸ್ಕ್ ಧರಿಸಿ ಓಡಾಡುವ ಪರಿಸ್ಥಿತಿ ಎದುರಾದರೆ ಅಚ್ಚರಿಯೇನಿಲ್ಲ.
ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಗಿಡ ಮರಗಳು ಕಡಿಮೆಯಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು ಮನೆಯಿಂದ ಹೊರಗಡೆ ಹೋದರೆ ಧೂಳು, ಹೊಗೆ. ಇನ್ನು ಈ ಮಾಲಿನ್ಯ ಸಮಸ್ಯೆಯಿಂದ ಪಾರಾಗಲು ಜನ ಏರ್ ಪ್ಯೂರಿಫೈಫೆರ್ ಮೊರೆಹೋಗುವುದು ಸಹಜ.
ಆದರೆ ನಮ್ಮ ಪ್ರಕೃತಿಯಲ್ಲೇ ಈ ಸಮಸ್ಯೆಗೆ ಪರಿಹಾರವಿದೆ.ಅದುವೇ ಗಾಳಿಯನ್ನು ಶುದ್ಧೀಕರಣ ಮಾಡಬಲ್ಲ ಕೆಲವೊಂದು ಗಿಡಗಳು. ಮನೆಯಲ್ಲಿ ಏರ್ ಪ್ಯೂರಿಫೈಫೆರ್ ತಂದಿಡುವ ಬದಲು ಈ ಗಿಡಗಳನ್ನು ಬೆಳೆಸಿದರೆ ಸಾಕು, ಶುದ್ಧವಾದ ಗಾಳಿಯನ್ನು ಉಸಿರಾಡಬಹುದು. ಈ ಕೆಳಗಿನ ಗಿಡಗಳು ಗಾಳಿಯನ್ನು ಶುದ್ಧ ಮಾಡಬಲ್ಲವು.
1.ಲೋಳೆಸರ: ಲೋಳೆಸರದ ಅನೇಕ ಆರೋಗ್ಯಕರ ಗುಣಗಳ ಬಗ್ಗೆ ನಮಗೆ ತಿಳಿದಿದೆ. ಇದನ್ನು ಕೂದಲು, ತ್ವಚೆ ಆರೈಕೆಯಲ್ಲಿ ಬಳುಸುತ್ತಾರೆ. ಇನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ಧಾಗಿ ಬಳಸಲಾಗುವುದು. ಈ ಗಿಡ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮೊನಾಕ್ಸೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶುದ್ಧಗಾಳಿ ದೊರೆಯುತ್ತದೆ.
2. ಶತಾವರಿ: ಆಯುರ್ವೇಧದಲ್ಲಿ ಶತಾವರಿ ಬಳಸಿ ಅನೇಕ ಮದ್ದುಗಳನ್ನು ತಯಾರಿಸುತ್ತಾರೆ.ನರ ಸಂಬಂಧಿತ ರೋಗ, ಗ್ಯಾಸ್ಟ್ರಿಕ್, ಅಲ್ಸರ್ ಮುಂತಾದ ಕಾಯಿಲೆಗಳನ್ನು ಗುಣ ಪಡಿಸಲು ಶತಾವರಿ ಬಳಸಲಾಗುವುದು. ಹಾಗು ಗಾಳಿಯನ್ನು ಶುದ್ಧಿಕರಿಸುವ ಕಾರ್ಯ ಮಾಡುತ್ತದೆ.
3. ಹಾವಿನ ಸಸ್ಯ: ನೋಡಲು ಹಾವಿನಂತೆ ಕಾಣುವ ಈ ಸಸ್ಯ, ಮನೆಯೊಳಗೆ ಬೆಳೆಸಲು ಸೂಕ್ತವಾಗಿದೆ. ಈ ಸಸ್ಯವಿದ್ದ ಕಡೆ ಹಾವು ಕೂಡ ಬರುವುದಿಲ್ಲ. ಕಡಿಮೆ ಬೆಳಕು ಬೀಳುವ, ತೇವಾಂಶ ಇರುವ ಕಡೆ ಈ ಗಿಡವನ್ನು ಇಡಬಹುದು. ಇನ್ನು ಮನೆಯೊಳಗೆ ಇಟ್ಟರೆ ಗಾಳಿಯಲ್ಲಿರುವ ಹಾನಿಕಾರಕ ಅಂಶಗಳನ್ನು ಹೀರಿಕೊಂಡು ನಮಗೆ ಶುದ್ಧ ಗಾಳಿಯನ್ನು ನೀಡುತ್ತದೆ.
4.ಡ್ರ್ಯಾಗನ್ ಗಿಡ: ಇದು ಆಫೀಸ್ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಗಿಡ ನೋಡಲು ತುಂಬಾ ಆಕರ್ಷಕವಾಗಿದ್ದು ಆಫೀಸ್ ಹಾಗು ಮನೆಗೆ ವಿಶೇಷ ಕಳೆ ನೀಡುತ್ತದೆ. ಪೇಂಟ್ ವಾಸನೆ, ಸಿಗರೇಟ್ ಹೊಗೆ ಈ ರೀತಿಯ ಕಲುಷಿತ ಗಾಳಿಯನ್ನು ಇದು ಶುದ್ಧೀಕರಿಸುತ್ತದೆ.