ಗಣಿನಾಡು ಬಳ್ಳಾರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸ್ ಧೃಢ.

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ 19 ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.ಜಿಲ್ಲೆಯ ಹರಪನಹಳ್ಳಿಯ ತಾಲ್ಲೂಕಿನ ಅಗಸನಕಟ್ಟೆ  ಮೂಲದ 47 ವರ್ಷದ ವ್ಯಕ್ತಿಯಲ್ಲಿ  ಕೊರೋನಾ ವೈರಸ್ ಇರುವುದು ದೃಢವಾಗಿದೆ.ಬಳ್ಳಾರಿಯ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಗುಜರಾತ್ ನಲ್ಲಿ ಪಾಸಿಟಿವ್ ವ್ಯಕ್ತಿಯ ಲಿಂಕ್ ಇತ್ತು ಎನ್ನಲಾಗಿದೆ. ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಓಪಿಜಿ ಸೆಂಟರ್ ನಲ್ಲಿ ಕ್ವಾರೆಂಟೆನ್ ನಲ್ಲಿದ್ದ ವ್ಯಕ್ತಿ- ಇತನ ಜತೆಗೆ ಬಂದಿದ್ದ ಗದಗ್ ಮೂಲದ 9 ಜನರನ್ನು ಗದಗ್ ಜಿಲ್ಲಾಡಳಿತ ಕ್ವಾರೆಂಟೆನ್ ಮಾಡಿದೆ. ಜತೆಗೆ ಬಂದಿದ್ದ ಟ್ರಾವೇಲ್ಸ್ ನ ಚಾಲಕ ಹಾಗೂ ಕ್ಲೀನರ್ ಗೂ ಕ್ವಾರೆಂಟೆನ್ ಮಾಡಲಾಗಿದೆ.

 ಬಳ್ಳಾರಿಯಲ್ಲಿ 18 ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ, 13 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನೂ  05 ಪ್ರಕರಣಗಳು ಸಕ್ರೀಯ ಎಂದು ಬಳ್ಳಾರಿಯ ಆರೋಗ್ಯ ಇಲಾಖೆಯ ಉನ್ನತ ಮೂಲಗಳ ಮಾಹಿತಿ ನೀಡಿದ್ದಾರೆ.