ಲಾಕ್ ಡೌನ್ ನಿಂದ ಬಿಗ್ ರಿಲೀಫ್ ನೀಡಿದ ಸಿಎಂ ಯಡಿಯೂರಪ್ಪ : ಬಸ್ ಸಂಚಾರಕ್ಕೆ ಅನುಮತಿ : ಎಲ್ಲಾ ರೀತಿಯ ಅಂಗಡಿ ತೆರೆಯಲು ಅವಕಾಶ.

ಲಾಕ್ ಡೌನ್ ನಿಂದ ಯಾವಾಗ ಮುಗಿಯೂತ್ತೋ ಎಂದು ಕಾದು ಕುಳಿತಿದ್ದ ಜನತೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಿಗ್ ರಿಲೀಫ್ ನೀಡಿದ್ದಾರೆ.
ನಿರಿಕ್ಷೇಯಂತೆ ಇಂದು ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ ಲಾಕ್ ಡೌನ್ 4.0 ರಾಜ್ಯದಲ್ಲಿ ಯಾವ ಸ್ವರೂಪದಲ್ಲಿರಲಿದೆ ಎಂದು ಮಾಹಿತಿ ನೀಡಿದರು...ಹಾಗದರೆ ಹೊಸ ಮಾರ್ಗಸೂಚಿಯಲ್ಲಿ ಯಾವೆಲ್ಲಾ ವಲಯಗಳಿಗೆ ವಿನಾಯತಿ ನೀಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ..... 

ಬಸ್ ಸಂಚಾರಕ್ಕೆ ಅನುಮತಿ....

ಯೆಸ್..ರಾಜ್ಯದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ನಾಳೆಯಿಂದ ರಸ್ತೆಗಿಳಿಯಲಿವೆ. ಆದರೆ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಕೆಲವೊಂದು ಷರತ್ತು ವಿಧಿಸಿದೆ. ಬಸ್ ಗಳು ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ಮಾತ್ರ ಸಂಚರಿಸಬೇಕು.ಬಸ್ ನಲ್ಲಿ 30 ಜನರಿಗೆ ಮಾತ್ರ ಪ್ರವೇಶ...ರೆಡ್ ಝೋನ್ ಹಾಗೂ ಕಂಟೈನಮೆಂಟ್  ಏರಿಯಾಗಳಲ್ಲಿ ಬಸ್ ಸಂಚಾರ ಇರುವುದಿಲ್ಲ...ಇನ್ನು ಬಸ್ ನಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಜಿಮ್ ಸಲೂನ್ ಸೇರಿದಂತೆ ಎಲ್ಲಾ ಅಂಗಡಿಗಳು ಓಪನ್....

ಲಾಕ್ ಡೌನ್ ಘೋಷಣೆ ಆದ ದಿನದಿಂದ ಇಂದಿನ ವರೆಗೂ ಸಲೂನ್ ಗಳನ್ನು ತೆಗೆಯಲು ಅವಕಾಶ ನೀಡಿರಲಿಲ್ಲಾ. ಆದ್ರೆ ಹೊಸ ಮಾರ್ಗಸೂಚಿಯಲ್ಲಿ ಜಿಮ್, ಸಲೂನ್ ಸೇರಿದಂತೆ ಎಲ್ಲಾ ಬೀದಿ ಬದಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಇನ್ನು  ಮಾಲ್ ಹಾಗೂ ಥಿಯೇಟರ್ ಗಳಿಗೆ ವಿಧಿಸಿದ್ದ ನಿರ್ಬಂಧ ಲಾಕ್ ಡೌನ್ 4.0 ನಲ್ಲೂ ಮುಂದುವರಿಯಲಿದೆ. ಹೊಟೇಲ್ ನಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇವೆಲ್ಲದರ ಜೊತೆಗೆ ಪಾರ್ಕ್ ತೆರೆಯಲು ಸಹ ಅನುಮತಿ ನೀಡಲಾಗಿದ್ದು ಬೆಳಿಗ್ಗೆ 7 ರಿಂದ 9 ಗಂಟೆ ಹಾಗೂ ಸಂಜೆ 5 ರಿಂದ 7 ರ ವರೆಗೆ ಮಾತ್ರ ತೆರೆಯಬಹುದಾಗಿದೆ. ಅಂತಾರಾಜ್ಯ ಬಸ್ ಹಾಗೂ ರೈಲು ಸಂಚಾರ ನಿರ್ಬಂಧ ಇನ್ನಷ್ಟು ದಿನ ಮುಂದುವರಿಯಲಿದೆ.