"ಆರ್ಥಿಕತೆಯಲ್ಲಿ ಗ್ರೀನ್ ಶೂಟ್ಸ್ ಗೋಚರಿಸಲಾರಂಭಿಸಿದೆ": ಸಿ.ಎಂ.ಗಳಿಗೆ ಪಿ.ಎಂ. ಮೋದಿಜಿ ಮಾತು...!

ಕೊವಿಡ್-19 ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ -16 ರ ಮಂಗಳವಾರ, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವೈರಸ್ ವಿರುದ್ಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಸ್ವಾವಲಂಬಿ ಭಾರತದ ಮಹತ್ವವನ್ನು ಒತ್ತಿ ಹೇಳಿದರು.

"ಕಳೆದ ಕೆಲವು ವಾರಗಳಲ್ಲಿ ನಾವು ಮಾಡಿದ ಪ್ರಯತ್ನಗಳಿಂದಾಗಿ ನಮ್ಮ ಆರ್ಥಿಕತೆಯಲ್ಲಿ ಗ್ರೀನ್ ಶೂಟ್ಸ್ ಗೋಚರಿಸಲಾರಂಭಿಸಿದೆ. ಈ ಹಿಂದೆ ಕಡಿಮೆಯಾಗಿದ್ದ ವಿದ್ಯುತ್ ಬಳಕೆ ಹೆಚ್ಚುತ್ತಿದೆ. ರಸಗೊಬ್ಬರ ಮಾರಾಟವು ಕಳೆದ ವರ್ಷ ಮೇ ತಿಂಗಳಿಗಿಂತಲೂ ಈ ವರ್ಷ ಮೇ'ಗೆ ದ್ವಿಗುಣಗೊಂಡಿದೆ", ಎಂದು ಅವರು ಹೇಳಿದರು.

"ಅನ್ಲಾಕ್ 1 ಜಾರಿಯಾಗಿ, ಎರಡು ವಾರಗಳು ಕಳೆದಿವೆ. ಈ ಸಮಯದಲ್ಲಿ ನಮ್ಮ ಅನುಭವವು ಭವಿಷ್ಯದಲ್ಲಿ ನಮಗೆ ಪ್ರಯೋಜನಕಾರಿ ಆಗಬಹುದು. ಇಂದು ನಾನು ನಿಮ್ಮಿಂದ ರಾಜ್ಯಗಳ ವಾಸ್ತವತೆಯನ್ನು ತಿಳಿದುಕೊಳ್ಳಲು ಇಚ್ಚಿಸುತ್ತೇನೆ. ನಿಮ್ಮ ಸಲಹೆಗಳು ಭವಿಷ್ಯದ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡುತ್ತವೆ.", ಎಂದು ಪ್ರಧಾನಿ ಮೋದಿ ಸಾರ್ವಜನಿಕ ಭಾಷಣದಲ್ಲಿ ರಾಜ್ಯಗಳ ಸಿ.ಎಂ.ಗಳಿಗೆ ತಿಳಿಸಿದರು.