'ಸುಶಾಂತ್ ಕಷ್ಟದ ಸಮಯದಲ್ಲಿ ಯಾರು ಅವರಿಗಾಗಿ ನಿಲ್ಲಲಿಲ್ಲ': ಭಾವನನಿ. ಚಿತ್ರರಂಗದಲ್ಲಿನ ಪೈಪೋಟಿಯಿಂದ ಸುಶಾಂತ್ ಆತ್ಮಹತ್ಯೆ..?: ತನಿಖೆ ನಡೆಸಲಿರುವ ಮುಂಬೈ ಪೊಲೀಸ್..
14 ಜೂನ್ 2020ರಂದು, ಬಾಲಿವುಡ್ ನ ಪ್ರಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್, ತಮ್ಮ 34ನೇ ವಯಸ್ಸಿನಲ್ಲೇ ಮುಂಬೈನ ತಮ್ಮ ನಿವಾಸದಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಹೊರಬಿದ್ದಂತೆಯೇ, ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಬಾಲಿವುಡ್ ಗಣ್ಯರು ವಿಷಾದ ವ್ಯಕ್ತಪಡಿಸಿದರು.
ಈ ಘಟನೆಗೆ ಪ್ರತಿಕ್ರಿಯಿಸಿದ ಬಾಲಿವುಡ್ನ ಪ್ರಸಿದ್ಧ ಹೇರ್ಸ್ಟೈಲಿಸ್ಟ್ ಸ್ವಪ್ನಾ ಭಾವನಾನಿ, "ಕಳೆದ ಕೆಲವು ವರ್ಷಗಳಿಂದ ಸುಶಾಂತ್ ತುಂಬಾ ಕಷ್ಟದ ಸಮಯವನ್ನು ಎದುರಿಸುತ್ತಿದ್ದು ರಹಸ್ಯವೇನೂ ಅಲ್ಲ. ಆಗ ಸುಶಾಂತ್ ಗಾಗಿ ಯಾರೂ ನಿಲ್ಲಲಿಲ್ಲ ಅಥವಾ ತಮ್ಮ ಸಹಾಯ ಹಸ್ತವನ್ನು ಚಾಚಲಿಲ್ಲ. ಆದರೆ ಈಗ ಅವರ ಸಾವಿಗೆ ಟ್ವಿಟ್ಟರ್ ನಲ್ಲಿ ತಮ್ಮ ವಿಷಾದ ವ್ಯಕ್ತ ಪಡಿಸುತ್ತಿರುವುದು ಬಾಲಿವುಡ್ ಎಂತಹ ಚಿಕ್ಕ ಮನಸ್ಥಿತಿಯದ್ದು ಎಂಬುದನ್ನು ಪ್ರದರ್ಶಿಸುತ್ತದೆ. ಇಲ್ಲಿ ಯಾರೂ ನಮ್ಮ ಸ್ನೇಹಿತರಲ್ಲ" ಎಂದು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಚಿತ್ರರಂಗದಲ್ಲಿನ ಪೈಪೋಟಿಯಿಂದಾಗಿ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಆದ್ದರಿಂದ ಮುಂಬೈ ಪೊಲೀಸರು, ಈ ದೃಷ್ಟಿಕೋನವನ್ನು ಸಹ ಪರಿಗಣಿಸಿ ತನಿಖೆ ಮಾಡಲಿದ್ದಾರೆ ಎಂದು ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.