ತಾವರಗೇರಾ ಪಟ್ಟಣದಲ್ಲಿ ಮಹಾಶಿವರಾತ್ರಿ ಆಚರಣೆ....

 

ತಾವರಗೇರಾ ಪಟ್ಟಣದಲ್ಲಿ ಮಹಾಶಿವರಾತ್ರಿ ನಿಮಿತ್ತ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಜಾಗರಣೆ,ಅನ್ನಸಂತರ್ಪಣೆ ಹಾಗೂ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯವು ಬೀದಿಬೀದಿಗಳಲ್ಲಿ ಶಾಂತಿ ಯಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು.

 

ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ರಾತ್ರಿ ಭಜನೆ ಕಾರ್ಯಕ್ರಮ ದೊಂದಿಗೆ ಜಾಗರಣೆ ಮಾಡಿ ಬೆಳಗ್ಗೆ ಶಿವಲಿಂಗಕ್ಕೆ ರುದ್ರ ಅಭಿಷೇಕವನ್ನು ಮಾಡಿ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಪವಾಡ ಬಸವೇಶ್ವರ ದೇವಾಲಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು.ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯವು ಬೀದಿಬೀದಿಗಳಲ್ಲಿ ಶಾಂತಿ ಯಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು. ಸಂಚಾಲಕರಾಗಿ ಬಿ.ಕೆ.ಪ್ರವಿತ್ರ ಮಾತಾಡುತ್ತಾ ಈಶ್ವರೀಯ ಸಂದೇಶ ಭಗವಂತ ಈ ಜನತೆಗೆ ಅವತರಣೆ ಆದ ದಿನವೇ ಶಿವರಾತ್ರಿ ಎಂದು ಕರೆಯಲಾಗುತ್ತದೆ.ಅಶಾಂತಿ,ಅಗೌರವ,ಅಲೆದಾಟ,ಅತ್ಯಾಚಾರ,ಅನಾಚಾರ,ಅರಾಜಕತೆ,ಅಜ್ಞಾನ,ಅಂಧಕಾರ,ಅತಿವೃಷ್ಟಿ,ಸಂಕಟವನ್ನು ದುಃಖ,ಭಯ, ಬಡತನ,ರೋಗ, ಧರ್ಮಬ್ರಹ್ಮತೆ,ಕರ್ಮಬ್ರಹ್ಮತೆ, ನೀತಿ ಬ್ರಹ್ಮತೆಗಳಿಂದಿ ಧರ್ಮ ಜ್ಞಾನಿ ಆಗಿರುವಂತಹ ಭಾರತ ದೇಶವನ್ನು ಮತ್ತೆ ಸ್ಮರಣೀಯ ರಾಜ್ಯವನ್ನಾಗಿ ಸ್ಥಾಪಿಸುವುದಕ್ಕೆ ಭಗವಂತನೇ ಅವತರಿಸಿದ್ಧಾನೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಚಂದ್ರಶೇಖರ ನಾಲತ್ವಾಡ,ಮಲ್ಲನಗೌಡ ಓಲಿ,ರುದ್ರಪ್ಪ ಅಕ್ಕಿ,ಆದನಗೌಡ ಪಾಟೀಲ,ಮಂಜುನಾಥ ಜುಲೂಕುಂಟಿ ಹಾಗೂ ವಿದ್ಯಾರ್ಥಿಗಳು,ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

 

ವರದಿ ಶರಣಪ್ಪ ಕುಂಬಾರ ತಾವರಗೇರಾ