ಬೋಂಡ ತಿಂದು ಮಹಿಳೆ ಸಾವು..


ಚೆನ್ನೈ: ಮೊದ್ಲೇ ಇದು ಚಳಿಗಾಲ. ಬೆಳಗ್ಗೆ ಎದ್ದು ಬಿಸಿ ಬಿಸಿ ಕಾಫಿ ಟೀ ಕುಡ್ದು ಕೆಲವ್ರು ಚಳಿಯಿಂದ ತಪ್ಪಿಸಿಕೊಳ್ತಾರೆ. ಇನ್ನೂ  ಕೆಲವ್ರು ಬಿಸಿ ಬಿಸಿಯಾಗಿರೋ ಬೋಂಡಾ ಬಜ್ಜಿ ತಿಂದು ಮೈಚಳಿ ಹೋಗಲಾಡಿಸಿಕೊಳ್ತಾರೆ. ಆದ್ರೆ ಹೀಗೆ ಬೋಂಡಾ  ತಿಂದ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಚೆನ್ನೈನ ಚುಲೈಮೇಡು ಪ್ರದೇಶದಲ್ಲಿ ನಡೆದಿದೆ.


45 ವರ್ಷದ ಪದ್ಮಾವತಿ  ಮೃತಪಟ್ಟ ಮಹಿಳೆ. ಆಕೆ ತಮ್ಮ ತಾಯಿಯೊಂದಿಗೆ ಮನೆ ಪಕ್ಕದ ಹೋಟೆಲ್‍ಗೆ ಹೋಗಿದ್ದರು. ಅಲ್ಲಿ ಆಲೂ ಬೋಂಡ ಖರೀದಿಸಿ ತಿನ್ನುತ್ತಿದ್ದರು, ಈ ವೇಳೆ ಅವರ ಗಂಟಲಲ್ಲಿ ಬೋಂಡದ ಚೂರು ಸಿಕ್ಕಿಹಾಕಿಕೊಂಡು, ಉಸಿರಾಟದ ಸಮಸ್ಯೆ ಎದುರಾಗಿತ್ತು. ನಂತರ ಆಕೆಯನ್ನು ಕಿಲ್‍ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಉಸಿರಾಡಲಾಗದೇ ಪದ್ಮಾವತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.