ಸರಣಿ ಸಮಬಲಕ್ಕೆ ಕೊಹ್ಲಿ ಪಡೆ ಸಜ್ಜು, ಮತ್ತೊಂದು ಕ್ಲೀನ್'ಸ್ವೀಪ್'ಗೆ ಕಿವೀಸ್ ಪ್ಲಾನ್!
ನಾಳೆಯಿಂದ ಭಾರತ-ನ್ಯೂಜಿಲೆಂಡ್ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಕ್ರೈಸ್ಟ್'ಚರ್ಚ್'ನ ಹೇಗ್ಲಿ ಓವಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ತಿರುಗೇಟು ನೀಡಲು ಟೀಮ್ ಇಂಡಿಯಾ ಅಭ್ಯಾಸದಲ್ಲಿ ನಿರತವಾಗಿದೆ. ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲ ಮಾಡಿಕೊಳ್ಳುಲು ಸಜ್ಜಾಗಿದೆ.
ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಲವೊಂದು ಬದಲಾವಣೆಯೊಂದಿಗೆ ಮೈದನಕ್ಕೆ ಇಳಿಯುವ ಸಾಧ್ಯದೆ ಇದೆ. ಪಾದ ಗಾಯಕ್ಕೆ ತುತ್ತಾಗಿರುವ ಇಂಶಾತ್ ಶರ್ಮ ಬದಲು ಸ್ಪೀಡ್ ಸ್ಟಾರ್ ಉಮೇಶ್ ಯಾದವ್ ಆಡುವುದು ಬಹುತೇಕ ಖಚಿತವಾಗಿದೆ. ಕಳೆದ ಪಂದ್ಯದಲ್ಲಿ ಮಂಕಾಗಿದ್ದ
ಸ್ಪಿನ್ನರ್ ಅಶ್ವಿನ್ ಬದಲು ಆಲ್ರೌಂಡರ್ ರವೀಂದ್ರ ಜಡೇಜಾ ಕಣಕ್ಕಿಳಿಯುವ ಸಾಧ್ಯತೆ ಇದೆ .
ಇತ್ತ ಕಿವೀಸ್ ಕೂಡ ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿ ಇದೆ. ನ್ಯೂಜಿಲೆಂಡ್ ತಂಡಕ್ಕೆ ನೀಲ್ ವ್ಯಾಗ್ನರ್ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ.ಈ ಮೈದಾನದಲ್ಲಿ ಕಿವೀಸ್ ಆಡಿರುವ ಆರು ಟೆಸ್ಟ್ ಪಂದ್ಯ 4 ಗೆದ್ದು, ಒಂದು ಸೋತು ಹಾಗೂ ಒಂದು ಡ್ರಾ ಕಂಡಿದೆ.ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ.ಹೇಗ್ಲಿ ಓವಲ್ ಪಿಚ್'ನಲ್ಲಿ ವೇಗಿಗಳು ಲಾಭ ಪಡೆಯಲ್ಲಿದ್ದಾರೆ