ಕುಷ್ಟಗಿ ತಾಲೂಕಿನಲ್ಲಿ ಸರ್ವಜ್ಞ ಜಯಂತಿ ಆಚರಣೆ...

ಕುಷ್ಟಗಿ ತಾಲೂಕಿನ ತ್ರಿಪದಿ ಕವಿ ಸರ್ವಜ್ಞನ ಜಯಂತಿಯ ಅಂಗವಾಗಿ ಜಾತಿ,ವಿಜಾತಿ ಎನ್ನದೆ ಎಲ್ಲಾ ಜಾತಿಗಳನ್ನು ಮೀರಿ ಪ್ರಯತ್ನಿಸಿದಾಗ ಜಾತಿಯನ್ನು ಹೋಗಲಾಡಿಸಲು ಸಾಧ್ಯ.ಹದಿನೈದು ಹದಿನಾರನೇ ಶತಮಾನದಲ್ಲಿ ತ್ರಿಪದಿ ಕವಿ ಸರ್ವಜ್ಞನ ಜನನವೆಂದು ಶಿಲಾಶಾಸನದಲ್ಲಿ ಪುರಾವೆಗಳು ಕಂಡುಬಂದಿವೆ ಇಂದಿನ ದಿನಮಾನದಲ್ಲಿ ಜಯಂತಿಗಳಿಗೆ ಅರ್ಥವಿಲ್ಲ ನಾವು ಹುಟ್ಟುಹಾಕಿದ್ದು ಜಾತಿಗಳ ಸಂಘಟನೆಗಳಿಂದ ದೂರವಿರಿಸಿ ನಾವು ಶಿಕ್ಷಣಕ್ಕೆ ಪ್ರಮುಖ್ಯತೆ ಕೊಡಬೇಕಾಗಿದೆ.ನಾಡಗೀತೆ,ರಾಷ್ಟ್ರಗೀತೆ,ರೈತಗೀತೆ ಇವುಗಳ ಪ್ರಾಮುಖ್ಯತೆ ಪಡೆಯಲು ಶಿಕ್ಷಣಕ್ಕೆ ಮಹತ್ವ ಕೊಡಬೇಕಾಗಿದೆ. ಸರ್ಕಾರದಲ್ಲಿ ಆರ್ಥಿಕ ಶಕ್ತಿ ಉಳಿದಿಲ್ಲ ಸರ್ಕಾರದ ರೀತಿನೀತಿಗಳು ದಿನದಿಂದ ದಿನಕ್ಕೆ ಬದಲಾಗುತ್ತವೆ ಅದಕ್ಕಾಗಿ ನಾವೆಲ್ಲರೂ ದುಡಿದು ಸಮಾಜದಲ್ಲಿ ಸಂಘಟನೆ ಕಟ್ಟಬೇಕಾಗಿದೆ.ಕುಂಬಾರ ಸಮಾಜದ ಸಣ್ಣದು ಎನ್ನದೆ  ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ದುಷ್ಚಟಕ್ಕೆ ಮಾರಿ ಹೋಗದೆ ಸಮಾಜದಲ್ಲಿ ನಮ್ಮದೇ ಸಮಾಜವನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಉದ್ಘಾಟಿಸಿ ಹಾಗೂ ಅಧ್ಯಕ್ಷ ಸ್ಥಾನವನ್ನುವಹಿಸಿ ಶಾಸಕ ಅಮರೇಗೌಡ ಬಯ್ಯಾಪುರ ಪಾಟೀಲ ಹೇಳಿದರು.ವಿಶೇಷವಾಗಿ ಉಪನ್ಯಾಸಕರಾಗಿ ಡಾಕ್ಟರ್ ಎಸ್ .ವಿ.ಡಾಣಿ. ಪ್ರಾಚಾರ್ಯರು ತ್ರಿಪದಿ ಕವಿ ಸರ್ವಜ್ಞನ ವಚನಗಳು ಹಾಗೂ ಜನನ ಕುರಿತ್ತು ಉಪನ್ಯಾಸವನ್ನು ಕೂಟ್ಟರು.ಅಥಿತಿಗಳಾಗಿ ಎಸ್.ಬಿ.ಸುಕದ್ ಹಾಗೂ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ನಿಡಗುಂದಿ ಮಾತನಾಡಿ ಎರಡರಿಂದ ಮೂರು ವರ್ಷದವರೆಗೆ ತ್ರಿಪದಿ ಕವಿ ಸರ್ವಜ್ಞನ ಜಯಂತಿಯನ್ನು ಸರಳವಾಗಿ ಹಾಗೂ ಸರಕಾರದ ಆದೇಶ ಮೇರೆಗೆ 500ನೇ ತ್ರಿಪದಿ ಕವಿ ಸರ್ವಜ್ಞನ ಜಯಂತಿಯನ್ನು ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಸಮಾಜದಲ್ಲಿ ಕುಂಬಾರ ಸಮಾಜಕ್ಕೆ ಪ್ರಮುಖ್ಯತೆ ಬೇಕಾಗಿದೆ ಯುವಕರು, ಹಿರಿಯರು ಸಮಾಜದಲ್ಲಿ ಪ್ರಮುಖ ಸ್ಥಾನವನ್ನು ವಹಿಸಬೇಕಾಗಿದೆ ಸರ್ವಜ್ಞ ಕುಂಬಾರ ಸಮಾಜಕ್ಕೆ ಸೀಮಿತವಾಗಿದೆ ಎಲ್ಲಾ ಜಾತಿಯ ಸಮಾಜಕ್ಕೆ ಸಂಬಂಧಿಸುತ್ತಾನೆ.ಭಾಲ್ಕಿ ಹಾಗೂ ಹಿರೇಕೆರೂರ್ ತೀರ್ಥಕ್ಷೇತ್ರಗಳೆಂದು ಆಶಾಭಾವನೆ ನಮ್ಮದಾಗಿದೆ ಹಾಗೂ ಪ್ರವಾಸಿ ಧಾರ್ಮಿಕ್ ಕ್ಷೇತ್ರವನ್ನು ಹೊರಡಿಸಿ ಹಾಗೂ ಸರ್ವಜ್ಞ ಮತ್ತು ಗುಂಡಯ್ಯ ಪ್ರತಿಷ್ಠಿತ ಬಜೆಟ್ ನಲ್ಲಿ ಅನುದಾನವನ್ನು ನಿಗದಿಪಡಿಸಲಾಗುತ್ತಿದೆ.

ಕುಷ್ಟಗಿ ಪಟ್ಟಣದಲ್ಲಿ ಶ್ರೀ ಬುತ್ತಿ ಬಸವೆಶ್ವೇರ ದೇವಸ್ಥಾನದಿಂದ ತ್ರಿಪದಿ ಕವಿ ಸರ್ವಜ್ಞನ ಭಾವಚಿತ್ರವನ್ನು ಮೆರವಣಿಗೆ ಮೂಲಕ ಮಹಿಳೆಯರು ಕುಂಭವನ್ನು ಒರುವ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮದ್ದಾನೆಶ್ವೇರ ಮಠಕ್ಕೆ ಕೊನೆಗೊಂಡಿತು.ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ರಾಮಣ್ಣ,ಕುಂಬಾರ್ ತಾಲೂಕ ಪಂಚಾಯತ್ ಮಾಜಿ ಸದಸ್ಯೆ ಸುವರ್ಣ ಕುಂಬಾರ,ಉಪ ತಹಶೀಲ್ದಾರ್ ರಜನಿಕಾಂತ್ ಶರಣಯ್ಯ ಸ್ವಾಮಿ,ಚನ್ನಬಸಪ್ಪ ದೋಟಿಹಾಳ,ಶರಣಪ್ಪ ಕುಂಬಾರ್ ತಾವರಗೇರಾ,ಸಂಗಪ್ಪ,ಕರಿಬಸಪ್ಪ,ಚಂದ್ರಶೇಖರ್ ಮುದೆನೂರ ಹಾಗೂ ನಾಡಗೀತೆ,ರೈತಗೀತೆ  ಕಾವೇರಿ ಸಂಗಡಿಗರು ನೆರವೇರಿಸಿದ್ದರು ಹಾಗೂ ಕುಂಬಾರ ಸಮಾಜದವರು ಭಾಗವಹಿಸಿದ್ದರು.

ವರದಿ ಶರಣಪ್ಪ ಕುಂಬಾರ ತಾವರಗೇರಾ