ವೀಕೆಂಡ್ ನಲ್ಲಿ ಸಿನಿಮೊತ್ಸವಕ್ಕೆ ಭರ್ಜರಿ ರೆಸ್ಪಾನ್ಸ್ : ಹೌಸ್ ಫುಲ್ ಆಗಿ ನಿರಾಶೆಗೊಂಡ ಜನ..
ಬೆಂಗಳೂರಿನಲ್ಲಿ ನಡೆಯುತ್ತಿರುವ 12 ನೇ ಸಿನಿಮೊತ್ಸವಕ್ಕೇ ವೀಕೆಂಡ್ ನಲ್ಲಿ ಪ್ರೇಕ್ಷಕರ ದಂಡೇ ಹರಿದುಬಂದಿತ್ತು. ವೀಕೆಂಡ್ ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಮಾಲ್ ನ ಬಹುತೇಕ ಸ್ಕ್ರೀನ್ ಗಳು ಹೌಸ್ ಫುಲ್ ಆಗಿದ್ದವು. ಜನ ಸಿನಿಮಾ ಪ್ರಾರಂಭಕ್ಕೂ ಅರ್ಧ ಗಂಟೆಗೂ ಮೊದಲೇ ಸ್ಕ್ರೀನ್ ಗಳ ಮುಂದೇ ಕ್ಯೂ ನಲ್ಲಿ
ನಿಂತಿರುವ ದೃಶ್ಯ ಕಂಡುಬಂತು. ಇನ್ನು ಸ್ಕ್ರೀನ್ ಗಳು ಹೌಸ್ ಫುಲ್ ಆದ ಕಾರಣ ತುಂಬಾ ಜನರಿಗೆ ತಮ್ಮಿಷ್ಟದ ಸಿನಿಮಾ ನೋಡಲು ಆಗದೇ ನಿರಾಶೆಗೊಂಡರು.
ಇನ್ನು ಸಿನಿಮಾ ನೋಡಲು ಅವಕಾಶ ಸಿಗದ ಜನರು ಸಿನಿಮೊತ್ಸವದ ಆಯೋಜಕರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ಆಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಮಧ್ಯ ಪ್ರವೇಶಿಸಿ ಜನರನ್ನು ಸಮಾಧಾನಗೋಳಿಸಿದರು. ಯಾರು ನಿರಾಶರಾಗಬೇಡಿ ಇವತ್ತಿನ ಸಿನಿಮಾಗಳು ನಾಳೆ, ನಾಡಿದ್ದು ಪುನಃ ಪ್ರದರ್ಶನಗೋಳ್ಳುತ್ತವೆ. ನಿಮಗೆ ಯಾವುದೇ ಮೂವಿ ಮಿಸ್ ಆಗಲ್ಲ, ದಯವಿಟ್ಟು
ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಇದೆಲ್ಲ ನೋಡಿದಾಗ ಸಿನಿಮೊತ್ಸವದಲ್ಲಿ ಜನರ ಸಿನಿಮೊತ್ಸಾಹ ಮೇರೆ ಮೀರಿರುವುದು ಗೋತ್ತಾಗುತ್ತಿದೆ. ಇನ್ನು ಕೇವಲ ಸಿನಿಮಾ ಪ್ರದರ್ಶನ ಮಾತ್ರವಲ್ಲದೇ ಸಿನಿಮಾ ಸಂಭಂಧಪಟ್ಟ ಅನೇಕ ಕಾರ್ಯಾಗಾರಗಳು ಸಹ ನಡೆದವು. ಒಟ್ಟಾರೆ ವಾರದ ಕೊನೆಯ ಎರಡು ದಿನ ಸಿನಿಮೊತ್ಸವದಲ್ಲಿ ಸಿನಿಮಾಸಕ್ತರ ಸಂಭ್ರಮ ಮುಗಿಲುಮುಟ್ಟಿತ್ತು.