ಶಿಕ್ಷಣ ಸಚಿವರ ಆದರ್ಶ ನಡೆ : ನೆಲದ ಮೇಲೆ ಕುಳಿತು ಮಕ್ಕಳೊಂದಿಗೆ ಊಟ ಮಾಡಿದ ಶಿಕ್ಷಣ ಸಚಿವ- ಸುರೇಶ್ ಕುಮಾರ್

ಕೋಲಾರದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಯೊಂದರಲ್ಲಿ ಮಕ್ಕಳ ಜೊತೆ ಕುಳಿತು ನೆಲದ ಮೇಲೆ ಊಟ ಮಾಡಿದ್ದಾರೆ .
ಬರಪೀಡಿತ ಜಿಲ್ಲೆ ಎಂದೇ ಹೆಸರುವಾಸಿಯಾಗಿರುವ ಈ ಭಾಗದ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಕಳೆದ ಅಕ್ಟೋಬರ್ ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ಸಿರಿಧಾನ್ಯಯುಕ್ತ ಬಿಸಿಯೂಟ ಕಾರ್ಯಕ್ರಮವು ಹತ್ತು ವಾರಗಳಲ್ಲಿ ನಿಂತಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದ ಸಿರಿಧಾನ್ಯಯುಕ್ತ ಖಾದ್ಯ ಭೋಜನವನ್ನು ಮತ್ತೆ ಶುರು ಮಾಡುವಂತೆ ಪೋಷಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ವತಃ ಶಿಕ್ಷಣ ಸಚಿವರೇ ಶಾಲೆಗೆ ಭೇಟಿ ಕೊಟ್ಟು ಮಾಹಿತಿ ಪಡೆದಿದ್ದಾರೆ. ಈ ಸಂದರ್ಭ ಮಕ್ಕಳೊಂದಿಗೆ ಕುಳಿತು ಊಟ ಮಾಡಿ ಬಿಸಿಯೂಟವನ್ನೂ ಪರಿಶೀಲಿಸಿದ್ದಾರೆ. ಪಾಯಸ, ಹೆಸರು ಬೇಳೆ ಪಲ್ಯ, ಕಾಳು ಸಾರು, ಅನ್ನ ಸವಿದಿದ್ದಾರೆ.