ಕೆನಡಾ ಕೋವಿಡ್ ಲಸಿಕೆಗೆ ಭಾರತ ಅಭಯ ಹಸ್ತ
ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೆ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ತ್ರಿಡಿಯೋ ಕರೆ ನೀಡಿದ್ದು, ಕೋವಿಡ್ ಲಸಿಕೆಯ ವಿಚಾರದ ಅಂಗವಾಗಿ ಭಾರತ ಕೆನಡಾ ದೇಶಕ್ಕೆ ಸಹಕಾರ ನೀಡುತ್ತದೆ ಎಂದು ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಎರಡು ದೇಶದ ನಾಯಕರು ಪರಸ್ಪರ ಆಸಕ್ತಿದಾಯಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.
ಕೋವಿಡ್ ಲಸಿಕೆಯ ಪರಿಶ್ರಮಕ್ಕೆ ಭಾರತ ಸಹಕರಿಸುತ್ತದೆ
ಭಾರತದಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ತ್ರಿಡಿಯೋ ಮಾತನಾಡಿದ್ದು, ದೆಹಲಿ ಕೆನಡಾ ರಾಯಭಾರದ ಶೈಲಿಯನ್ನು ಅನುಸರಿಸಿದ್ದರು. ಇದು ಹೀಗೆ ಮುಂದುವರೆದರೆ, ದ್ವಿಪಕ್ಷೀಯ ಸಂಭಂಧಗಳ ಮೇಲೆ ಗಂಭೀರವಾದ ಪರಿಣಾಮ ಬೀರಬಹುದು ಎಂದು ಜಸ್ಟಿನ್ ಹೇಳಿದ್ದರು. ಇದಾದ ಎರಡು ತಿಂಗಳ ನಂತರ, ಕೆನಡಾ ನಾಯಕ ಈ ಒಪ್ಪಂದಕ್ಕೆ ಕರೆ ನೀಡಿದ್ದಾರೆ .ಕೆನಡಾ ತಯಾರಿಸಿರುವ ಕೋವಿಡ್ ಲಸಿಕೆಯ ಪರಿಶ್ರಮಕ್ಕೆ ಭಾರತ ಸಹಕರಿಸುತ್ತದೆ ಎಂದು ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಕೆನಡಾ ದೇಶಕ್ಕೆ ಅಭಯ ಹಸ್ತ ನೀಡಿದ ನಮೋ
ನನ್ನ ಗೆಳೆಯ ಜಸ್ಟಿನ್ ತ್ರಿಡಿಯೋ ಕರೆ ಮಾಡಿದ್ದು, ನನಗೆ ಬಹಳ ಸಂತೋಷವಾಗಿದೆ. ಕೆನಡಾ ದೇಶದಲ್ಲಿ ತಯಾರಾದ ಕೋವಿಡ್ ಲಸಿಕೆಯನ್ನ, ಭಾರತ ಸಾಧ್ಯವಾದಷ್ಟು ಎಲ್ಲಾ ಕಡೆ ತಲಿಪಿಸುವ ಪ್ರಯತ್ನ ಮಾಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆನಡಾ ದೇಶಕ್ಕೆ ಅಭಯ ಹಸ್ತ ನೀಡಿದ್ದಾರೆ. ಹವಾಮಾನ ಬದಲಾವಣೆ ಹಾಗು ಆರ್ಥಿಕ ಚೇತರಿಕೆ ವಿಚಾರಗಳ ಕುರಿತು ಸಹ ಉಭಯ ದೇಶದ ನಾಯಕರು ಚರ್ಚಿಸುತ್ತಾರೆ.