
ಟೀಮ್ ಇಂಡಿಯಾ ಬಾಗಿಲು ತಟ್ಟಲು ಪರದಾಡುತ್ತಿರುವ ಸುರೇಶ್ ರೈನ
ಟೀಮ್ ಇಂಡಿಯಾದ ಮಾಜಿ ಆಟಗಾರಾದ ಸುರೇಶ್ ರೈನ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಸುದೀರ್ಘ ಸಮಯದಿಂದ ದೂರ ಉಳಿದಿದ್ದಾರೆ. ಕಿವೀಸ್ ಸರಣಿಗೆ ಆಯ್ಕೆ ಹಾಗುವ ನಿರೀಕ್ಷೆ ಹುಸಿಯಾಗಿದೆ. ಮತ್ತೊಂದು ಬಾರಿ ಟೀಮ್ ಇಂಡಿಯಾ ಬಾಗಿಲು ತಟ್ಟವ ಸಾಧ್ಯತೆ ಕಡಿಮೆಯಾಗಿದೆ. ಅವರು ಎಡಗೈ ಬ್ಯಾಟ್ಸ್‌ಮನ್ ಹಾಗೂ ಅರೆಕಾಲಿಕ ಆಫ್ ಸ್ಪಿನ್ ಬೌಲಿಂಗ್ ಜೊತೆಗೆ ಅದ್ಭುತ ಫೀಲ್ಡಿಂಗ್ ಹೆಚ್ಚಿನ ಜನಪ್ರಿಯತೆ ಸಾಧಿಸಿದ್ದರು.
ಐಪಿಎಲ್ ಚೆನ್ನ ತಂಡವನ್ನು ಪ್ರತಿನಿಧಿಸುತ್ತಿರುವ ಸುರೇಶ್ ರೈನಾ, ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮೆಚ್ಚಿನ ಆಟಗಾರ ಎಂದೆನಿಸಿದ್ದಾರೆ. ಹಾಗಿರಬೇಕಾದರೆ 33ರ ಹರೆಯದ ರೈನಾ, ನಿವೃತ್ತಿ ಸನ್ನಿಹಿತವಾಗಿದೆಯೇ ಅಥವಾ ಟಿ20 ವಿಶ್ವಕಪ್ ತಂಡಕ್ಕೆ ಪುನರಾಗಮನ ಮಾಡಿಕೊಳ್ಳುವರೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.