ಕೊನೆಗೂ ಕ್ಯಾನ್ಸರ್ ಗೆ ಔಷಧಿ ಕಂಡು ಹಿಡಿದ ವಿಜ್ಞಾನಿಗಳು....!

ಈವರೆಗೂ ವಿಜ್ಞಾನಿಗಳಿಗೆ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ಔಷಧಿ ಹುಡುಕುವುದು ಬಹುದೊಡ್ಡ ಸವಾಲಾಗಿತ್ತು. ಅದೆಷ್ಟೇ ಶ್ರಮಪಟ್ಟರೂ ಔಷಧಿ ಕಂಡು ಹಿಡಿಯುವುದು ಮಾತ್ರ ಅಸಾಧ್ಯವಾಗಿತ್ತು. ಆದರೀಗ ಇಸ್ರೇಲ್‌ನ ವಿಜ್ಞಾನಿಗಳು 2020ರೊಳಗೆ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಔಷಧಿ ತಯಾರಿಸುತ್ತೇವೆಂದು ಖಚಿತಪಡಿಸಿದ್ದಾರೆ. ಈ ವಿಜ್ಞಾನಿಗಳು ತಾವು ಸಿದ್ಧಪಡಿಸಿರುವ ಔಷಧಿ, ಪರೀಕ್ಷಿಸುವ ಕೊನೆಯ ಹಂತದಲ್ಲಿದ್ದಾರೆನ್ನಲಾಗಿದೆ. ಒಂದು ವೇಳೆ ಅವರು ತಮ್ಮ ಪ್ರಯೋಗದಲ್ಲಿ ಯಸಶ್ವಿಯಾದದರೆ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ನೋವಿನಿಂದ ಮುಕ್ತಿ ಸಿಗಲಿದೆ.


ಡಬ್ಬಡ್ ಮುಟಾಟೋ (Dubbed MuTaTo) ಹೆಸರಿನ ಈ ಔಷಧಿಯನ್ನು ಎನಲ್ಯೂಷನ್ ಬಯೋಟೆಕ್ನಾಲಜೀಸ್ ಲಿಮಿಟೆಡ್ ಕಂಪೆನಿಗೆ ಸಂಬಂಧಿಸಿದ ವಿಜ್ಞಾನಿಗಳು ಆವಿಷ್ಕಾರ ಮಾಡಿದ್ದಾರೆ. ಔಷಧಿ ಪ್ರಯೋಗವು ಅಂತಮ ಘಟ್ಟ ತಲುಪಿದ್ದು, ಯಶಸ್ವಿಯಾಗುತ್ತಿದ್ದಂತೆಯೇ ಅಂದರೆ ಸುಮಾರು 2020ಯೊಳಗೆ ಕ್ಯಾನ್ಸರ್ ಪೀಡಿತರಿಗೆ ನೀಡಲಾಗುತ್ತದೆ.