ನಾಳೆ ಸಂಭವಿಸಲಿರುವ ತೋಳ ಚಂದ್ರಗ್ರಹಣ ........

ನಾಳೆ (ಜ.10)  ವರ್ಷದ ಮೊದಲ ಚಂದ್ರ ಗ್ರಹಣ,
ಸೂರ್ಯಗ್ರಹಣದ ಬೆನ್ನಲ್ಲೇ ನಾಳೆ ಚಂದ್ರಗ್ರಹಣವು ಗೋಚರಿಸುತ್ತದೆ. ಆದರೆ ಈ ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ನೋಡಬಹುದೆನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಚಂದ್ರ ಗ್ರಹಣದಲ್ಲಿ ಎರಡು ಬಗೆಗಳಿದ್ದು, ಮೊದಲನೇ ಬಗೆ  ಚಂದ್ರನ ಒಂದು ಭಾಗದ ಮೇಲೆ ಭೂಮಿಯ ನೆರಳು ಹಾದುಹೋಗುತ್ತದೆ, ಅಂದರೆ ಪಾರ್ಶ್ವ ಚಂದ್ರಗ್ರಹಣ. ಎರಡನೇ ಬಗೆ  ಸಂಪೂರ್ಣ ಚಂದ್ರಗ್ರಹಣ ಅಂದರೆ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸುತ್ತದೆ.

ಸೂರ್ಯಗ್ರಹಣ ದಂತೆ ಚಂದ್ರಗ್ರಹಣ ವೀಕ್ಷಿಸಲು ವಿಶೇಷ ಕನ್ನಡಕ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ .

ತೋಳ ಚಂದ್ರಗ್ರಹಣ ಎಂದರೇನು?
ಗ್ರಹಣದ ಸಮಯದಲ್ಲಿ ಚಂದ್ರನ ಮೇಲ್ಮೈಯ ಶೇಕಡಾ 90ರಷ್ಟು ಭಾಗವು ಭೂಮಿಯಿಂದ ಆವರಿಸಲ್ಪಡುತ್ತದೆ. ನೆರಳಿನ ಹೊರಭಾಗ ಮಾತ್ರ ಕಾಣಿಸಿಕೊಳ್ಳುತ್ತದೆ. ಪೆನಂಬ್ರಲ್‌ ಚಂದ್ರ ಗ್ರಹಣವು ಸಾಮಾನ್ಯವಾಗಿ ಸ್ವಲ್ಪ ಗಾಢವಾಗಿದ್ದರೂ, ಹುಣ್ಣಿಮೆಯ ದಿನ ವೀಕ್ಷಿಸಲು ಸಾಧ್ಯವಿಲ್ಲ, ಆದರೆ ಆಕಾಶವು ಸ್ಪಷ್ಟವಾಗಿದ್ದರೆ ಮಾತ್ರ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಲು ಸಾಧ್ಯವಾದರೆ ಖಂಡಿತವಾಗಿಯೂ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು. ಇದು ಭಾರತದಲ್ಲೂ ಗೋಚರವಾಗಲಿದೆ.

ಗ್ರಹಣದ ಗೋಚರ ಕಾಲ 
ಗ್ರಹಣದ ದಿನ : ಶುಕ್ರವಾರ

ಗೃಹಣದ ಸಮಯ: ರಾತ್ರಿ 10.30 ರಿಂದ 2.35 ರ ತನಕ

ಗ್ರಹಣ ಗೋಚರಿಸುವ ಒಟ್ಟು ಸಮಯ: 4 ಗಂಟೆ 5 ನನಗರಗಳು
ಗೋಚರಿಸುವ ಸ್ಥಳಗಳು: ಏಷ್ಯಾ, ಆಫ್ರೀಕಾ, ಯುರೂಪ್, ಆಸ್ಟ್ರೇಲಿಯಾ ಮತ್ತು ಭಾರತದ ಎಲ್ಲಾ ನಗರಗಳು.