3.jpeg)
ರೆಡ್ ಹ್ಯಾಂಡ ಆಗಿ ಸಿಕ್ಕಿಬಿದ್ದ ಪತಿರಾಯರು..
ಬೆಳಗಾವಿ: ಹುಕ್ಕೇರಿಯ ಝೇಂಡಾ ಕಟ್ಟೆ ಹತ್ತಿರ ಮನೆಯೊಂದರಲ್ಲಿ ವಿವಾಹಿತ ಪುರುಷರಿಬ್ಬರು ಮಹಿಳೆಯರ ಜೊತೆ ಚಕ್ಕಂದ ಆಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಅವರ ಪತ್ನಿಯರು ತಕ್ಷಣ ಸ್ಥಳಕ್ಕೆ ಬಂದು ಪತಿ ಹಾಗೂ ಮಹಿಳೆಯರಿಗೆ ಸಾರ್ವಜನಿಕರ ಜೊತೆ ಸೇರಿ ಚೆನ್ನಾಗಿ ಥಳಿಸಿದ್ದಾರೆ.
ಮನೆಯೊಂದರಲ್ಲಿ ಪರ ಸ್ತ್ರೀಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಇಬ್ಬರು ಪುರುಷರನ್ನು ಅವರ ಪತ್ನಿಯರೇ ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ ಘಟನೆ ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಈ ಘಟನೆ ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.