ಇನ್ನೇರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಗೆದ್ದವರಿಗೆ ಮಾತ್ರ ಮಂತ್ರಿ ಅವಕಾಶ ಮೂಲ ಬಿಜೆಪಿಗರಿಗೂ ಸಿಗಲಿದೆ ಮಂತ್ರಿ ಭಾಗ್ಯ

ಬೆಂಗಳೂರು :  ವರ್ಲ್ಡ್ ಎಕಾನಾಮಿಕ್ ಫೋರಂ ನಲ್ಲಿ ಭಾಗವಹಿಸಲು ಸ್ವೀಜರ್ ಲ್ಯಾಂಡ್ ಗೆ ತೆರಳಿದ್ದ ಸಿಎಂ ಯಡಿಯೂರಪ್ಪ ರಾಜ್ಯಕ್ಕೆ ಮರಳಿದ್ದು, ಕೆಂಪೇಗೌಡ ಅಂತರಾಷ್ಟೀಯ ನಿಲ್ದಾಣದ ಬಳಿ ಸಂಪುಟ ವಿಸ್ತರಣೆಯ ಕುರಿತು ಮಾತನಾಡಿದರು. 

ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತೆವೆ. ರಾಜ್ಯಕ್ಕೆ ಅಮಿತ್ ಶಾ ಆಗಮಿಸುತಿದ್ದು ಅವರೊಡನೆ ಚರ್ಚಿಸಿದ ಬಳಿಕ ಸಚಿವರ ಪಟ್ಟಿಯನ್ನು ಅಂತಿಮಗೋಳಿಸಲಾಗುವುದು ಎಂದರು. 

ಉಪಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುವುದು. ಸೋತವರ ಬಗ್ಗೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳುವ ಮೂಲಕ ಉಪಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಶಾಕ್ ನೀಡಿದರು. ಮೂಲ ಬಿಜೆಪಿಯವರಿಗೂ ಸಚಿವ ಸ್ಥಾನ ನೀಡಬೇಕೆಂದು ಪಕ್ಷದಲ್ಲಿ ಒತ್ತಡವೀದ್ದು , ಸಂಪುಟ ವಿಸ್ತರಣೆ ನಿಜಕ್ಕೂ ಯಡಿಯೂರಪ್ಪನವರಿಗೆ ಸವಾಲಾಗಿ ಪರಿಣಮಿಸಿದೆ.