ಟರ್ಕಿಯಲ್ಲಿ ಭೂಕಂಪನಕ
ಇಸ್ತಾಂಬುಲ್ : ಭಾರೀ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಪರಿಣಾಮ 18 ಜನರು ಮೃತಪಟ್ಟಿರುವ ಘಟನೆ ಟರ್ಕಿಯ ಎಲಾಝಿಗ್ ನ ಪೂರ್ವ ಪ್ರಾಂತ್ಯದ ಸಿವರ್ಸೆ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಘಟಿಸಿದೆ.ಶುಕ್ರವಾರ ರಾತ್ರಿ 8.55 ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಭೂಕಂಪನದ ತೀವ್ರತೆ 6.8 ಮ್ಯಾಗ್ನಿಟ್ಯೂಡ್ ಇತ್ತು ಎನ್ನಲಾಗಿದ್ದು, 10 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರತೆ ಹರಡಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.ಭೂಕಂಪನದಲ್ಲಿ ಅನೇಕ ಕಟ್ಟಡಗಳು ನೆಲಸಮವಾಗಿದ್ದು, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸಂಶಯವ್ಯಕ್ತಪಡಿಸಲಾಗಿದೆ.