ಇಂದು ಬಿಜೆಪಿಯ ನೂತನ ರಾಷ್ಟೀಯ ಅಧ್ಯಕ್ಷರ ನಾಮ ನಿರ್ದೇಶನ : ಜೆಪಿ ನಡ್ದಾ ಅವಿರೋಧ ಆಯ್ಕೆ ಸಾಧ್ಯತೆ....

ದೆಹಲಿ : ಇಂದು ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಬಿಜೆಪಿಯ ನೂತನ ರಾಷ್ಟೀಯ ಅಧ್ಯಕ್ಷರ ಆಯ್ಕೆಗೆ ನಾಮ ನಿರ್ದೇಶನ ಪ್ರಕ್ರಿಯೆ ನಡೆಯಲಿದೆ. ಇಂದಿಗೆ ಅಮಿತ್ ಶಾ ಅವರ ರಾಷ್ಟೀಯ ಅಧ್ಯಕ್ಷ ಸ್ಥಾನ ಅವಧಿ  ಮುಗಿದ ಹಿನ್ನಲೆ ನೂತನ ಅಧ್ಯಕ್ಷರ ಪ್ರಕ್ರಿಯೆಯನ್ನು ಬಿಜೆಪಿ ಹಮ್ಮಿಕೊಂಡಿದೆ.

ಇನ್ನೊಂದೆಡೆ ಬಿಜೆಪಿ ಹಿರಿಯ ನಾಯಕ ಜೆಪಿ ನಡ್ದಾ ಅವರೇ ಮುಂದಿನ ರಾಷ್ಟೀಯ ಅಧ್ಯಕ್ಷ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇಂದು ರಾಷ್ಟೀಯ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಮಾಹಿತಿ ಅಧಿಕೃತವಾಗಿ ಹೊರಬೀಳಲಿದೆ.ಇನ್ನು ಇಂದಿನ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರು, ಕೇಂದ್ರ ಸಚಿವರು ಸೇರಿದಂತೆ  ರಾಜ್ಯಗಳ ಪ್ರಮುಖ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಹಲವು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಮೂಲಕ ದೇಶದೆಲ್ಲೆಡೆ ಪಕ್ಷದ ವ್ಯಾಪ್ತಿಯನ್ನು ಹೆಚ್ಚಿಕೊಂಡಿತ್ತು.
ಕೆಲವೊಂದು ರಾಜ್ಯ ಚುನಾವಣೆಯಲ್ಲಿ ಹಿನ್ನಡೆ ಆದದ್ದು ಹೊರತುಪಡಿಸಿದರೆ, ಅಮಿತ್ ಶಾ ಅವಧಿಯಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಅಭೂತಪೂರ್ವ ಗೆಲುವನ್ನು ಹಲವು ಚುನಾವಣೆಗಳಲ್ಲಿ ಕಂಡಿತು. ಈಗ ಅಮಿತ್ ಶಾ ಕೇಂದ್ರದಲ್ಲಿ ಸಚಿವರಾಗಿರುವ ಕಾರಣ ಅವರನ್ನು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಮಾಡುತ್ತಿಲ್ಲ.