ಮಾಜಿ ಪ್ರಧಾನ ಮಂತ್ರಿ ನರಸಿಂಹರಾವ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಆರ್ ಪ್ರಧಾನಿ ಮೋದಿಯನ್ನು ಆಗ್ರಹಿಸಿದ್ದಾರೆ.

ಮಾಜಿ ಪ್ರಧಾನ ಮಂತ್ರಿ ನರಸಿಂಹರಾವ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ ಸಿ ಆರ್ ಪ್ರಧಾನಿ ಮೋದಿಯನ್ನು ಆಗ್ರಹಿಸಿದ್ದಾರೆ.
ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್​ ಅವರಿಗೆ ಭಾರತ್​ ರತ್ನ ನೀಡಿ ಎಂದು ಒತ್ತಾಯಿಸಿದ್ದಾರೆ. ಈ ಕುರಿತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್​ ಮಂಗಳವಾರ ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯ ಮಂಡಿಸಲಿದೆ ಎಂದು ಹೇಳಿದರು. 
ಪಿವಿ ನರಸಿಂಹ ರಾವ್​ ಭಾರತದ 9ನೇ ಪ್ರಧಾನಿಯಾಗಿ 1991ರಿಂದ 1996ರ ವರೆಗಗೂ ಸೇವೆಸಲ್ಲಿಸಿದ್ದಾರೆ. ಅವರು ದೇಶದ ಆರ್ಥಿಕತೆ ಪರಿವರ್ತನೆ ತರಲು ಶ್ರಮಸಿದವರಲ್ಲಿ ಅಗ್ರಮಾನ್ಯರು. ರಾಷ್ಟ್ರದ ಆರ್ಥಿಕತೆ ದಿವಾಳಿಯ ಅಂಚಿನಲ್ಲಿ ಇದ್ದ ಪರಿಸಿತ್ಥಿಯಲ್ಲಿ ಇವರ ಸುಧಾರಣಾ ನೀತಿ ಭಾರತವನ್ನು  ವಿಶ್ವದ ಆರ್ಥಿಕತೆ ಮುಕ್ತಗೊಳಿಸಿ ಉದಾರೀಕರಣದ ನೀತಿಯನ್ನು ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರೂಂದಿಗೆ ನಿರ್ಮಿಸಿದ್ದ ನೀತಿಯಿಂದ ದೇಶ ಇಂದು ಆರ್ಥಿಕವಾಗಿ ಸಢೃಡವಾಗಿದೆ. ದೇಶ ಇಂದು  ಜಾಗತೀಕ ಉದಾರೀಕರಣದ ವಿಶ್ವದ ಬಲಿಷ್ಟ ರಾಷ್ಟ್ರಗಳಲ್ಲಿ ಒಂದು ಎನಿಸಿಕೂಳ್ಳಲು ಇವರ ಕೊಡುಗೆ ಗಣನೀಯ ಎಂದು ಉಲ್ಲೇಖಿಸಿದ್ದರು.

ಈಗ ನರಸಿಂಹರಾವ್​ ಅವರಗೆ ಮರಣೋತ್ತರ ಭಾರತ ರತ್ನದ ಕೂಗು ಏಕೆ ಕೇಳುತ್ತಿದೆ ಎಂದು ಯೋಚನೆ ಮಾಡತ್ತಿರಾ..??
ಜೂನ್ 28ರಂದು ಪಿ.ವಿ ನರಸಿಂಹರಾವ್ ಅವರ 99ನೇ ವರ್ಷದ ಜನ್ಮ ಸ್ಮರಣೆ. ಇದರ ಅಂಗವಾಗಿ ಹಾಗೂ ಅವರು ಭಾರತ ದೇಶಕ್ಕೆ ಸಲ್ಲಿಸಿದ ಅಪ್ರತಿಮ ಆರ್ಥಿಕ ಸುಧಾರಣೆಯನ್ನು ಪರಿಗಣಿಸಿ ಕೇಂದ್ರದ ಮೋದಿ ನೇತ್ವದ ಸರ್ಕಾರಕ್ಕೆ ಮನವಿ ಮಾಡಿರುವ ಕೆಸಿಆರ್. 
ನರಸಿಂಹರಾವ್ ಅವರ ಪೂರ್ಣ ಹೆಸರು ಪಾಮುಲಪರ್ತಿ ವೆಂಕಟ ನರಸಿಂಹ ರಾವ್. ಅವರು ಆಂಧ್ರ ಪ್ರದೇಶದ ಕರೀಮ ನಗರದಲ್ಲಿ ಜೂನ್ 28 1921 ರಂದು ಜನಿಸಿದ್ದರು . ನಂತರ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ  ರಾಜಕೀಯ ಜೀವನ ಪ್ರಾರಂಭಿಸಿದ್ದರು . ನಂತರ ಆಂಧ್ರ ಪ್ರದೇಶ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿರು. ನಂತರದ ಅವಧಿಯಲ್ಲಿ ರಾಜ್ಯ ಸರ್ಕಾರದ ಪಾಲಿನ ಸರ್ವೋಚ್ಚ ಹುದ್ದೆಯಾದ ಮುಖ್ಯಮಂತ್ರಿ ಹುದ್ದೆಗೆ ಏರಿದರು . ಭಾರತ ರಾಜಕಾರಣದಲ್ಲಿ ದುರ್ಗಾದೇವಿಯ ಅವತಾರ ಎಂದೇ ಕರೆಯಲ್ಪಡುವ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಸಚಿವ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ನಿರ್ವಹಿಸಿದರು.1991ರ ರಾಜೀವ್ ಗಾಂಧಿ ಕಾಲಾನಂತರ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನೆಹರು ಅಥವಾ ಗಾಂಧಿ ಮನೆತನಕ್ಕೆ  ಸೇರದವರಲ್ಲದಿದ್ದರೂ, ಪೂರ್ಣ ಐದು ವರ್ಷಗಳ ಕಾಲ ದೇಶದ ಪ್ರಧಾನಿ ಸ್ಥಾನದಲ್ಲಿದ್ದ ಮೊದಲ ವ್ಯಕ್ತಿ ನರಸಿಂಹರಾಯರೇ.
 ದೇಶದ ರಾಜಕಾರಣದಲ್ಲಿ ಇವರ ಹೆಸರು ಸದಾ ಹಚ್ಚ ಹಸಿರು . ಆಧುನಿಕ ಭಾರತದ ಶಿಲ್ಪಿ ಎಂದರೆ ತಪ್ಪಾಗಲಾರದು. ಇವರ ಹೊಸ  ಆರ್ಥಿಕ ನೀತಿ ಉದಾರೀಕರಣದ ಮೂಲಕ ಭಾರತವನ್ನು ವಿಶ್ವಕ್ಕೆ ಮುಕ್ತಗೊಳಿಸಿದರು, ಅಂದಿನ ಕಾಲಘಟ್ಟಕ್ಕೆ  ಹೊಲಿಸಿದ್ದರೆ ಭಾರತದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಶೇಕಡಾ 5.5 ಪ್ರಮಾಣದಲ್ಲಿ ದಾಖಗಿತ್ತು . ಮತ್ತೊಂದು ವಿಶೇಷತೆ ಪಿ.ವಿ ರಾವ್ ಅವರು 17 ಭಾಷೆ ಮಾತನಾಡಬಲ್ಲವರಾಗಿದ್ದರು . ಸಾಹಿತ್ಯ  ಕ್ಷೇತ್ರದಲ್ಲಿ  ಆಸಕ್ತಿ ಇದ್ದ ಇವರು  ತೆಲಗು ಭಾಷೆಯ ಜ್ಞಾನಪೀಠ ಪುರಸ್ಕ್ರತ ಕಾದಂಬರಿ  ವೇಯಿ ಪದಗಾಲು ಅನ್ನು ಹಿಂದಿ ಭಾಷೆಗೆ ಸಹಸ್ರ ಫಣ್  ಹೆಸರಿನಲ್ಲಿ ಭಾಷಾಂತರಿಸಿದ್ದಾರೆ. 
ಇಂತಹ ಸಧಾನೆ ಮಾಡಿದ ಇವರನ್ನು ಭಾರತದ ಅತ್ಯನ್ನತ ಪುರಸ್ಕಾರವಾದ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ತೆಲಂಗಾಣದ ಸಿಎಂ ಕೆ ಚಂದ್ರಶೇಖರ್​ರಾವ್​ ಅಭಿಪ್ರಾಯ ಪಟ್ಟಿದ್ದಾರೆ.