ಅಭಿನಯ ತರಂಗ...
ಅಭಿನಯ ತರಂಗ ಕಲಾ ಶಾಲೆಯ 2019 -2020ರ ಸಾಲಿನ ವಿದ್ಯಾರ್ಥಿಗಳಿಂದ ಡಿಸೆಂಬರ್ ೧೬ ರಂದು ಅತಿ ಸುಂದರವಾಗಿ ಮೂಡಿಬಂದ ನಾಟಕ "ಕೋರ್ಟ್ ಮಾರ್ಷಲ್ ". ಇದೊಂದು ಹಿಂದಿ ಭಾಷೆಯ ಕಥೆಯಾಗಿದ್ದು ಸಿದ್ದಲಿಂಗ ಪಟ್ಟಣ ಶೆಟ್ಟಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ .
ನಾಟಕದ ಕಥೆಯು ಸೈನ್ಯದಲ್ಲಿರುವ ಒಬ್ಬ ಸೈನಿಕನ ಸುತ್ತ ಹೆಣೆದುಕೊಳ್ಳುತ್ತೆ. ಕೆಳಜಾತಿಯವನಾದ ಸೈನಿಕನು ಎದುರಿಸುವ ಜಾತಿನಿಂದನೆ, ಅವಹೇಳನೆ ಗಳು ಪ್ರೇಕ್ಷಕರ ಮನಸ್ಸನ್ನು ಕದಡುತ್ತೆ. ನಿರಂತರ ಅವಮಾನಗಳಿಂದ ಸೈನಿಕನ ಮನೋವ್ಯಥೆಯನ್ನು ನಿರ್ದೇಶಕ ಲಕ್ಷ್ಮಣ ಕೆ. ಪಿ. ವೇದಿಕೆಯಲ್ಲಿ ಸಮರ್ಪಕವಾಗಿ ತಂದಿದ್ದಾರೆ.
ಹೀಗೆ ಮನನೊಂದ ಸೈನಿಕನೊಬ್ಬ ದುಡುಕಿ ತೆಗೆದುಕೊಳ್ಳುವ ನಿರ್ಧಾರ ನಂತರ ಅದರಿಂದಾಗಿ ಆತನು ಅನುಭವಿಸುವ ಶಿಕ್ಷೆ ನಾಟಕೀಯ ಬೆಳವಣಿಗೆಗಳಿಂದ ಮೂಡಿಬಂದಿದ್ದು ಪ್ರೇಕ್ಷಕರನ್ನು ಒಂದೂವರೆ ಗಂಟೆಗಳ ಕಾಲ ಮಂತ್ರಮುಗ್ಧರಾಗಿ ಮಾಡುತ್ತದೆ.
ನಾಟಕದ ಪ್ರಧಾನಪಾತ್ರದಲ್ಲಿ ರಾಮಚಂದ್ರ, ಕೋರ್ಟ್ ಮಾರ್ಷಲ್ ಪಾತ್ರದಲ್ಲಿ ಸೂರತ್, ಅಡ್ವೋಕೇಟ್ ಕಾಪ್ಟ್ ನ್ ರಾಯ್ ಆಗಿ ಸಂಜಯ್ ಪಾತ್ರಕ್ಕೆ ಜೀವತುಂಬುವುದರಲ್ಲಿ ಯಶಸ್ವಿಯಾಗಿದ್ದಾರೆ. ನಾಟಕನೋಡಿ ಹೊರಬಂದಾಗ ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದು ಬಹುಶಃ ಇದಕ್ಕೇ ಇರಬೇಕು ಅಂತಾ ನಿಮಗನಿಸಿದರೆ ಆಶ್ಚರ್ಯವೇನಿಲ್ಲ.
ವರದಿ: ಸಂಜಯ್.ಕೊಳ್ಳಿ
ರಾಯಚೂರು ಆಲ್ಮಾನ್ಯೂಸ್24 ಬೆಂಗಳೂರು