ಚೀನಾ ವಸ್ತುಗಳ ಆಮದು ಪ್ರಮಾಣ ತಗ್ಗಿಸಲು ಚಿಂತನೆ...

ಭಾರತ ಚೀನಾ ಗಡಿ ವಿವಾದ ಬಿಕ್ಕಟು ಸದ್ಯದ ಮಟ್ಟಿಗೆ ಶಾಂತವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಎಲ್ಲಾ ಕ್ಷೇತ್ರದಲ್ಲು ಚೀನಾದ ವಸ್ತುಗಳ ಆಮದು ಭಾಗಶಃ ಕಡಿಮೆ ಮಾಡಲು ದೇಶದ ಎಲ್ಲಾ ಒಕ್ಕೂಟ ತೀರ್ಮಾನಿಸಿದೆ.
ಭಾರತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಚೀನಾದಿಂದ ವಾಹನ ಬಿಡಿಭಾಗಗಳು ಆಮದಾತ್ತಿವೆ. ಕೊರೊನಾ ಬಿಕ್ಕಟ್ಟಿನಿಂದಾಗಿ ದೇಶದ ವಾಹನ ಉದ್ಯಮವು, ಬಿಡಿಭಾಗಗಳ ಪೊರೈಕೆಯಲ್ಲಿ ಆಗಿರುವ ಕೊರತೆಯಿಂದಾಗಿ, ದೇಶಿಯ ತಯಾರಿಕೆಗೆ ಆದ್ಯತೆ ನೀಡುವ ಮೂಲಕ ಆಮದು ತಗ್ಗಿಸುವ, ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ.ಉದ್ಯಮವು ಸ್ಥಳೀಯವಾಗಿ ತಯಾರಿಕೆಗೆ ಒತ್ತು ನೀಡಬೇಕು . ದೇಶ ಪ್ರಗತಿ ಕಾಣಲು ಹಾಗೂ ಸ್ವಾವಲಂಬನೆ ಸಾಧಿಸಲು ಸರ್ಕಾರ ಮತ್ತು ಕಂಪನಿಗಳು ಒಟ್ಟಾಗಿ ಒಂದು ರೂಪುರೇಷಿಯನ್ನು ನಿರ್ಮಿಸ ಬೇಕು . 
ಚೀನಾ ಸರಕು ಬಹಿಷ್ಕಾರ,ಉದ್ಯಮಿಗಳ ಸಹಕಾರ ಕೋರಿದ ಸಿಎಐಟಿ: ಚೀನಾದ ಸರಕುಗಳ ಬಹಿಷ್ಕಾರ ಆಂದೋಲನಕ್ಕೆ ಸಹಕಾರ ನೀಡುವಂತೆ ದೇಶದ ಪ್ರಮುಖ 50 ಉದ್ಯಮಿಗಳಿಗೆ ಅಖಿಲ ಭಾರತ ವರ್ತಕರ ಒಕ್ಕೂಟ(ಸಿಎಐಟಿ) ಮನವಿ ಮಾಡಿದೆ.