ಕೊರೊನಾ ಸೋಂಕಿಗೆ ಪ್ರಾಯೋಗಿಕ ಔಷಧಿ!!!
ಕೊರೊನಾ ಸೋಂಕಿಗೆ ಪ್ರಾಯೋಗಿಕ ಔಷಧಿಯನ್ನು ಹೈದರಾಬಾದ್ ಮೂಲದ ಔಷಧ ತಯಾರಕ ಸಂಸ್ಥೆ ಹೆಟೆರೂಗೆ (Remdesivir. covifor ) ತಯಾರಿಸಲು ಮತ್ತು ಮಾರಾಟ ಮಾಡಲು ಅನುಮೋದನೆ ದೊರಕಿದೆ. ದೇಶದ ಅತಿ ಹೆಚ್ಚು ಕೊರೊನಾ ಬಾಧಿತ ಮಾಹಾರಾಷ್ಟ್ರ ಮತ್ತು ದೆಹಲಿ ರಾಜ್ಯಗಳಿಗೆ ಮೊದಲ 20ಸಾವಿರ ಬಾಟಲ್ಗಳನ್ನು ಕಳುಹಿಸಿದೆ. ಗುಜರಾತ್ ಮತ್ತು ತಮಿಳುನಾಡುನಲ್ಲಿ ಕೊವಿಫಾರ್ ಎಂಬ ಬ್ರಾಂಡ್ನ ಹೆಸರಿನ ಔಷಧದ ಮೊದಲ ಬ್ಯಾಚ್ ರವಾನೆಯಾಗಿದೆ.
ಹೆಟೆರೂ ಔಷಧ ತಯಾರಕ ಸಂಸ್ಥೆ ಎರಡರಿಂದ ಮೂರು ವಾರದಲ್ಲಿ ಒಂದು ಲಕ್ಷ ಬಾಟಲಿಗಳನ್ನು ಉತ್ಪಾದಿಸುವ ಲಕ್ಷ್ಯ ಹೊಂದಿದೆ ಎಂದು ಹೇಳಿದೆ. ಮುಂದಿನ ಔಷಧಿಯ ಬ್ಯಾಚ್ ಅನ್ನು ಕೊಲ್ಕತ್ತಾ, ಇಂದೋರ್,ಭೋಫಾಲ್,ಲಕ್ನೋ,ಪಾಟ್ನಾ,
ಭೋಪಾಲ್,ರಾಂಚಿ,ಕೊಚ್ಚಿ,ತ್ರಿವೆಂಡ್ರಂ,ಗೋವಾಗೆ ತಲುಪಿಸುವ ಗುರಿಯನ್ನು ಹೊಂದಿದೆ.
ಹೆಟರೊ ಹೊರತಾಗಿ,ಸಿಪ್ಲಾ ಔಷಧಿ ಸಂಸ್ಥೆ ಯುಎಸ್ ಮೂಲದ ಔಷಧ ತಯಾರಿಕ ಕಂಪನಿ ಗಿಲ್ಯಾಡ್ ಸೈನ್ಸಸ್ ಇಂಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ . ಪ್ರಸ್ತುತ ಸರ್ಕಾರದ ಮೂಲಕ ಮಾತ್ರ ಲಭ್ಯವಿರುತ್ತದೆ ಎಂದು ಹೆಟೆರೊ ಗ್ರೂಪ್ ಆಫ್ ಕಂಪನಿಗಳ ಎಂಡಿ ವಂಶಿ ಕೃಷ್ಣ ಉಲ್ಲೇಖಿಸಿದ್ದಾರೆ.
ಹಾಗಿದ್ದರೆ ಈ ಔಷಧದ ಬೆಲೆ ಎಷ್ಟು ಯಾರು ಮತ್ತು ಹೇಗೆ ಬಳಸುತ್ತಾರೆ.??
ಈ ಔಷಧ ಬೆಲೆ 100 ಮಿಲಿಗ್ರಾಂ 5,400ರೂಗೆ ಹೆಟೆರೊ ಸಂಸ್ಥೆ ನೀಡುತ್ತಿದೆ. ಸಿಪ್ಲಾ ಸಂಸ್ಥೆ ಔಷಧ ಬೆಲೆ 100 ಮಿಲಿಗ್ರಾಂ 5000ರೊ ಬೆಲೆ ನಿಗದಿಮಾಡಿದೆ. ವರದಿಗಳ ಪ್ರಕಾರ, ಒಬ್ಬ ರೋಗಿಗೆ ಕನಿಷ್ಠ ಆರು ಬಾಟಲಿಯ ಅಗತ್ಯವಿರುತ್ತದೆ, ಹಾಗಂತ ಎಲ್ಲಾ ಕೊರೊನಾ ರೋಗಿಗಳಿಗೆ ಕೊಡುವುದಿಲ್ಲ . ಕೊರೊನಾ ಸೋಂಕು ಹೆಚ್ಚು ಬಾಧಿತರಾಗಿದ್ದರೆ ಮಾತ್ರ ಈ ಔಷಧವನ್ನು ಬಳಸುತ್ತಾರೆ.
ತೀವ್ರವಾದ ಕೊರೊನಾ ಪ್ರಕರಣಗಳಲ್ಲಿ ಮಾತ್ರ ಬಳಕೆಗೆ ರೆಗ್ಯುಲೇಟರ್ ಡ್ರಗ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಹೆಟೆರೊ ಹಾಗೂ ಸಿಪ್ಲಾ ಕಂಪನಿಗಳಿಗೆ ಅನುಮೋದಿಸಿದೆ.