ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಚಾಪರ್ ಕೇಸ್ : ಶ್ರವಣ್ ಗುಪ್ತಾ ಮನೆ ಮೇಲೆ ದಾಳಿ

ಅಗಸ್ಟಾವೆಸ್ಲ್ಯಾಂಡ್ ವಿವಿಐಪಿ ಚಾಪರ್ ಕೇಸ್ ಶ್ರವಣ್ ಗುಪ್ತಾ ಮನೆ ಮೇಲೆ ದಾಳಿ ..
ಉದ್ಯಮಿ ಶ್ರವಣ್ ಗುಪ್ತಾ ಅವರು ಯುರೋರೋಪಿನ ಮಧ್ಯವರ್ತಿ ಗೈಡೋ ಅವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಜಾರಿ ನಿರ್ದೇಶನಾಲಯ (ಇಡಿ)  ಅಧಿಕಾರಿಗಳು ಬಲವಾಗಿ ನಂಬಿದ್ದಾರೆ. ಗುಪ್ತಾ ಅವರ ಉದ್ಯಮ ಮತ್ತು ವಿವಿಧ ಆರು ಕಡೆ ಏಕಕಾಲಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.  ಅಗಸ್ಟಾವೆಸ್ಲ್ಯಾಂಡ್ ವಿವಿಐಪಿ  ಚಾಪರ್  ಹಗರಣದಲ್ಲಿ  ಮೇಲ್ನೋಟಕ್ಕೆ ಅವರು ಆರೋಪಿ ಎಂದು ಇಡಿ ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿ ಎಮಾರ್​ನ ಮಾಜಿ ವ್ಯವವಸ್ಥಾಪಕ ನೀರ್ದೇಶಕರು ಆಗಿದ್ದಾರೆ. 
ಜಾರಿ ನಿರ್ದೇಶನಾಲಯದ ಅಧಿಕಾರಿಗಳು  3,727ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ತಿನಿಖೆ ಚುರುಕುಗೂಳಿಸಿದ್ದು , 2016ರಲ್ಲಿ ಅವರನ್ನು ಪ್ರಶ್ನೆ ಮಾಡಲಾಗಿತ್ತು.ಈಗ ಗುಪ್ತಾ ಅವರನ್ನು (ಪಿಎಂಲ್ಏ) ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿ  ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಡಿ ಹೇಳಿದೆ.
ಎಮಾರ್ ಕಂಪನಿಯು ಹೊರಡಿಸಿರುವ ಪ್ರತ್ರಿಕಾ ಪ್ರಕಟಣೆಯಲ್ಲಿ ಶ್ರವಣ್ ಗುಪ್ತಾ ಅವರಿಗೆ ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ. ಎಮಾರ್ ಮತ್ತು ಎಂಜಿಫ್ ಕೆಲ ವರ್ಷಗಳ ಹಿಂದೆಯೇ ಬೇರ್ಪಟ್ಟಿದ್ದು ಎರಡು ಒಂದೇ ಕಂಪನಿಯಲ್ಲ ಎಂದು ಸ್ಪಷ್ಟಪಡಿಸಿದೆ.
ಒಂದು ವರದಿಯ ಪ್ರಕಾರ 2009ರಲ್ಲಿ ಗೈಡೋ ಹ್ಯಾಶ್ಕೆ ಎಮಾರ್​-ಎಂಜಿಎಫ್ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು. ಲಂಚದ ಹಣವನ್ನು ಭಾರತಕ್ಕೆ ತರುವಲ್ಲಿ  ಪ್ರಮುಖ ಪಾತ್ರಧಾರಿ ಈ ಗೈಡೋ ಹ್ಯಾಶ್ಕೆ . 
ಅಗಸ್ಟಾವೆಸ್ಟಲ್ಯಾಂಡ್ ಕಂಪನಿಯಿಂದ 12 ವಿವಿಐಪಿ ಚಾಪರ್​ಗಳನ್ನು ಖರೀದಿಸುವಲ್ಲಿ ಅಕ್ರಮ ಎಸಗಲಾಗಿತ್ತು. ಹಾಗೂ ಅವರ ಮೇಲೆ ಅಕ್ರಮ ಹಣ(ಮನಿ ಲಾಂಡರಿಂಗ್) ಪ್ರಕರಣದಲ್ಲಿ ಆರೋಪ ಇದೆ ಎಂದು ಜಾರಿ ನೀರ್ದೇಶನಾಲಯ  ಉಲ್ಲೇಖಿಸಿದೆ.  ಶ್ರವಣ್ ಗುಪ್ತಾ ಸ್ವಿಸ್ ಬ್ಯಾಂಕ ಖಾತೆಯಲ್ಲಿ ಬಹಿರಂಗಪಡಿಸದೆ ಠೇವಣಿ ಇಟ್ಟಿದ್ದು,2018ರಲ್ಲಿ 10.28 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಸಂಸ್ಥೆ ಮುಟ್ಟುಗೋಲು ಹಾಕಿದೆ.