ಮದುವೆ ಕಾರ್ಯಕ್ರಮಗಳಲ್ಲಿಯೂ ಮಾರ್ಷಲ್ಸ್
ದಿನೆಯಿಂದ ದಿನಕ್ಕೆ ನರಭಕ್ಷಕ ಕೊರೋನಾದ ಅಬ್ಬರ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಜನರು ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನ ಪಾಲಿಸಬೇಕಿದೆ. ರಸ್ತೆ ಬದಿಗಳಲ್ಲಿ, ಜನರು ಹೆಚ್ಚಾಗಿ ಓಡಾಟ ನಡೆಸುವ ಪ್ರದೇಶಗಲ್ಲಿ, ಸರ್ಕಾರ ಮಾರ್ಷಲ್ಸ್ ಗಳನ್ನ ನೇಮಕ ಮಾಡಿದೆ. ನಿಯಮಗಳನ್ನ ಉಲ್ಲಂಘನೆ ಮಾಡದಂತೆ ಇವರು ನೋಡಿಕೊಳ್ಳುತ್ತಾರೆ. ಆದರೆ ಜಾತ್ರೆ, ಮದುವೆ, ಇನ್ನಿತರ ಸಭೆ ಸಮಾರಂಭಗಳಲ್ಲಿ ಜನರು ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳುತ್ತಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ಆದ್ದರಿಂದ ಇನ್ಮುಂದೆ ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದಕ್ಕೆ ಸರ್ಕಾರ ಮಾರ್ಷಲ್ಸ್ ಗಳನ್ನ ನೇಮಕ ಮಾಡಿದೆ.
೫೦೦ ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
ಮದುವೆ ಕಾರ್ಯಕ್ರಮಗಳಲ್ಲಿ ೫೦೦ ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ, ಪ್ರತಿ ಮದುವೆ ಕಾರ್ಯಕ್ರಮಕ್ಕೆ, ಪ್ರೆತ್ಯೇಕವಾಗಿ ಒಬ್ಬ ಮಾರ್ಷಲ್ ನ ನಿಯೋಜನೆ ಮಾಡಲಾಗಿದೆ ಎಂದು ವೈದ್ಯಕೀಯ ಹಾಗು ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. 3 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು. ಇದು ಹೀಗೆ ಮುಂದುವರೆದರೆ ಸರ್ಕಾರ ಲಾಕ್ ಡೌನ್ ಗೆ ಕರೆ ನೀಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಎರಡನೇ ಸ್ಥಾನದಲ್ಲಿ ಬೆಂಗಳೂರು
ಕಾವಿಡ್ ಸೋಂಕು ಹರಡುವಿಕೆಯಲ್ಲಿ, ಕಲಬುರ್ಗಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ನಗರ ಎರಡನೇ ಸ್ಥಾನದಲ್ಲಿದೆ ಎಂದು ವೈದ್ಯಕೀಯ ಹಾಗು ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಬರಹ: ಶ್ರೀ ಹರ್ಷ