ಏಪ್ರಿಲ್ 30 ರ ವರೆಗೂ ಲಾಕ್ ಡೌನ್ ಅನಿವಾರ್ಯ : ಸಿ ಎಂ ಯಡಿಯೂರಪ್ಪ.

ಬೆಂಗಳೂರು : ದೇಶದಲ್ಲಿ ಕೊರೊನಾ ನಿಯಂತ್ರಣದ ಕುರಿತು ಇಂದು ಪ್ರಧಾನಿ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು. ಸಭೆಯಲ್ಲಿ ಬಹುತೇಕ ರಾಜ್ಯಗಳ ಸಿಎಂ ಗಳು ಲಾಕ್ ಡೌನ್ ಮುಂದುವರೆಸುವಂತೆ ಪ್ರಧಾನಿ ಮೋದಿ ಗೆ ಸಲಹೆ ನೀಡಿದ್ದಾರೆ.

ಇನ್ನು ಸಭೆ ಬಳಿಕ ಮಾಧ್ಯಮ ಸುದ್ದಿಗೋಷ್ಠಿ ನಡೆಸಿದ ಮುಮುಖ್ಯಮಂತ್ರಿಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಏಪ್ರಿಲ್ 30 ರ ವರೆಗೂ ಲಾಕ್ ಡೌನ್ ಮುಂದುವರೆಯಲಿದೆ ಎಂದು ತಿಳಿಸಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂದಿನ ಮೂರ್ನಾಲ್ಕು ವಾರಗಳು ನಿರ್ಣಾಯಕವಾಗಿವೆ ಎಂದಿದ್ದಾರೆ.

ಇನ್ನು ಸಭೆಯಲ್ಲಿ ಪ್ರಧಾನಿ ಮೋದಿ, ಲಾಕ್ ಡೌನ್ ನಿಂದ ಕೃಷಿ ಕ್ಷೇತ್ರ ಹಾಗೂ ಮೀನುಗಾರಿಕೆ ಕ್ಷೇತ್ರಗಳಿಗೆ ವಿನಾಯತಿ ನೀಡಲು ಸೂಚಿಸಿದ್ದಾರೆ. ಮುಂದಿನ 15 
ದಿನಗಳ ಕಾಲದ ಲಾಕ್ ಡೌನ್ ಈಗಿನ 
ಲಾಕ್ ಡೌನ್ ಗಿಂತ  ವಿಭಿನ್ನವಾಗಿರಲಿದೆ. ಮಂದಿನ 15 ದಿನಗಳ ಲಾಕ್ ಡೌನ್ ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.