ತಾವರಗೆರಾ ಪಟ್ಟಣದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮೂವರ ಬಂಧನ...
ತಾವರಗೇರಾ ಪಟ್ಟಣದಲ್ಲಿ ಅಕ್ರಮ ಮರಳು ಸಾಗಣೆಕೆ,ಮದ್ಯಮಾರಾಟ, ಲಾಕ್ ಡೌನ್ ಉಲ್ಲಂಘನೆ ಸೇರಿದಂತೆ ಎಲ್ಲಾ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪಿಎಸ್ಐ ಗೀತಾಂಜಲಿ ಸಿಂಧೆ ಹೇಳಿದರು.
ಅಕ್ರಮ ಮರಳು ಸಾಗಣೆಕೆ:ಟ್ರಾಕ್ಟರ್ ಜಪ್ತಿ,ಮುದೇನೂರು ಗ್ರಾಮದ ಸರ್ಕಾರಿ ಹಳ್ಳದಲ್ಲಿ ಅಕ್ರಮವಾಗಿ ಕಳ್ಳತನದಿಂದ ಕಪ್ಪು ಮರಳು 1000 ರೂ.ಬೆಲೆ ಬಾಳುವ ಲೋಡ ಮಾಡಿಕೊಂಡು ಟ್ರಾಕ್ಟರ್ ಮೂಲಕ ಸಾಗಾಣಿಕೆ ಮಾಡುತ್ತಿರುವ ಮರುಳು ತುಂಬಿದ ಟ್ರಾಕ್ಟರ್ ವಶಪಡಿಸಿಕೊಳ್ಳಲಾಗಿದೆ.
ಮದ್ಯ ಮಾರಾಟ:ಮೂವರು ಬಂಧನ,ಬಸವಣ್ಣಕ್ಯಾಂಪಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ 3 ಜನರನ್ನು ಬಂಧಿಸಿ, ಬಂಧಿತರಿಂದ 800 ರೂ.ಗಳು,ಮದ್ಯ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊರೋನ ಸೋಂಕು ಹರಡದಂತೆ ತಡೆಯಲು ನಿಷೇದಾಜ್ಞೆ ಇದ್ದರೂ ಸಹ ಸರ್ಕಾರ ನೀತಿ ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ 3 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಲಾಕ್ ಡೌನ್ ಉಲ್ಲಂಘನೆ: ನಾಲ್ವರು ಬಂಧನ,ಸಿಂಧನೂರು ವೃತ್ತದ ಹತ್ತಿರ ಪೆಟ್ರೊಲಿಂಗ್ ಕರ್ತವ್ಯದ ಮೇಲಿದ್ದಾಗ,ಕೊರೋನ ಸೋಂಕು ಹರಡದಂತೆ ತಡೆಯಲು ನಿಷೇದಾಜ್ಞೆ ಇದ್ದರೂ ಸಹ ತಿರುಗಾಡುತ್ತಿದ್ದ 4 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ತಾವರಗೇರಾ ಪೋಲಿಸ್ ಠಾಣೆಯಲ್ಲಿ ಎಲ್ಲಾ ಪ್ರಕರಣ ದಾಖಲಾಗಿವೆ.
ವರದಿ ಶರಣಪ್ಪ ಕುಂಬಾರ ತಾವರಗೇರಾ