ಆಯುರ್ವೇದ ಸಸ್ಯಗಳ ಮಹತ್ವ ........
ನಶಿಸಿ ಹೋದ ಸಸ್ಯ ಪ್ರಭೇದಗಳಿಂದ ಸಸ್ಯಗಳು ನಾಶವಾಗುತ್ತಿದೆ.
ಆಯುರ್ವೇದ ಔಷಧಿ ಪದ್ಧತಿಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಇದ್ದರೂ ಸಹ, ಈಗ ಈ ಪದ್ಧತಿ ಮೂಲೆಗುಂಪಾಗಿದೆ. ಇದಕ್ಕೆ ಕಾರಣ ಜನರು ತಮ್ಮ ಕಾಯಿಲೆಗೆ ತಕ್ಷಣದ ಪರಿಹಾರವನ್ನು ಮಾತ್ರ ಹುಡುಕುತ್ತಾರೆ. ಆದರೆ ಆಯುರ್ವೇದ ಔಷಧಿಗಳು ತಕ್ಷಣ ಪರಿಹಾರ ನೀಡದೇ ಹೋದರೂ, ಕ್ರಮೇಣವಾಗಿ ಸಂಪೂರ್ಣ ಗುಣಪಡಿಸುತ್ತದೆ.
ಸಸ್ಯಗಳನ್ನು ತಾಜಾ ಗಿಡಮೂಲಿಕೆ ಹಾಗೂ ಒಣ ಗಿಡಮೂಲಿಕೆ ಎಂದು ವಿಂಗಡಿಸಲಾಗಿದೆ. ಕೆಲವೊಂದು ತಾಜಾ ಗಿಡಮೂಲಿಕೆಗಳು ಸಮಯ ಕಳೆದಂತೆ, ಅದರ ವೈದ್ಯಕೀಯ ಗುಣಗಳನ್ನು ಕಳೆದುಕೊಳ್ಳುತ್ತದೆ. ಆದುದರಿಂದ ಅವುಗಳ ರಸವನ್ನು ತಾಜಾ ಇರುವಾಗಲೇ ಸೇವಿಸಬೇಕಾಗುತ್ತದೆ. ಇನ್ನು ಕೆಲವು ಸಸ್ಯಗಳನ್ನು ಒಣಗಿಸಿ ನಂತರ ಔಷಧಿಯನ್ನಾಗಿ ಉಪಯೋಗಿಸಬೇಕಾಗುತ್ತದೆ, ಅವುಗಳಿಗೆ ಒಣ ಗಿಡಮೂಲಿಕೆಗಳು ಎನ್ನುತ್ತಾರೆ.
ಜನರು ಈ ಗಿಡಮೂಲಿಕೆಗಳ ಔಷಧಿ ಬಳಸಿ ಆರೋಗ್ಯಕರವಾಗಿರಬೇಕು ಹಾಗೂ ರೋಗ ರಹಿತ ಸಮಾಜ ನಿರ್ಮಾಣವಾಗಬೇಕು.
ವೈದ್ಯಕೀಯ ಗುಣವುಳ್ಳ ಕೆಲವು ಸಸ್ಯಗಳ ಉಪಯೋಗ ಹಾಗೂ ಬಳಸುವಿಕೆ ಈ ಕೆಳಗಿನಂತಿವೆ:,
> ನೆಲ್ಲಿಕಾಯಿ ಗಿಡ : ಇದರಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಹಾಗೂ ಇದೊಂದು ರೋಗ ನಿರೋಧಕ ಶಕ್ತಿಯಾಗಿ ವರ್ತಿಸುತ್ತದೆ.
ದಿನಕ್ಕೆ ಒಂದಾದರೂ ನೆಲ್ಲಿಕಾಯನ್ನು ಯಾವುದಾದರೂ ರೂಪದಲ್ಲಿ ಸೇವಿಸಬೇಕು.
> ಬೇವು :ಇದು ಚರ್ಮರೋಗಗಳಿಗೆ ತುಂಬಾ ಒಳ್ಳೆಯದು. ಇದರ ಎಣ್ಣೆಯನ್ನು ಗಾಯದ ಮೇಲೆ ಹಚ್ಚಲಾಗುವುದು, ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಇದು ಒಳ್ಳೆಯ ಔಷಧಿಯಾಗಿದೆ.
ಇದನ್ನು ರಸಾಯನ ಮಾಡಿಕೊಂಡು ಬೆಲ್ಲದ ಜೊತೆಗೆ ಕುಡಿಯಬಹುದು.
>ಅಲೋವೆರಾ : ಇದನ್ನು ಆಯುರ್ವೇದದಲ್ಲಿ ಕುಮಾರಿ ಎಂದು ಕರೆಯುತ್ತಾರೆ. ಏಕೆಂದರೆ ಇದು ಸ್ತ್ರೀ ರೋಗಗಳಿಗೆ ಸೂಕ್ತವಾದ ಔಷಧಿಯಾಗಿದೆ ಅಲ್ಲದೆ, ಇದರ ಜೆಲ್ ಅನ್ನು ಅರಶಿನ ಪುಡಿಯ ಜೊತೆಗೆ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಒಳ್ಳೆಯ ಹಾಗೂ ಕಡಿಮೆ ಬೆಲೆಯ ಫೇಸ್ ಪ್ಯಾಕ್ ಆಗುತ್ತದೆ.
ಅಲ್ಲದೆ ಇದರ ಜೆಲ್ಲನ್ನು ಅರ್ಧ ಚಮಚ ದಿನಾಲು ಸೇವಿಸಿದರೆ ಲಿವರ್ ಗೆ ಶಕ್ತಿ ಕೊಡುತ್ತದೆ.
>ಪೇರಳೆ : ಪೇರಳೆ ಹಣ್ಣಿನ ಎಲೆ ಹಾಗೂ ತೊಗಟೆ ಔಷಧಿಯನ್ನು ತಯಾರಿಸುವುದಕ್ಕೆ ತುಂಬಾ ಉಪಯೋಗವಾಗುತ್ತದೆ.
ಬಾಯಲ್ಲಿ ಹುಣ್ಣಾದಾಗ ಪೇರಳೆ ಹಣ್ಣಿನ ಚಿಗುರು ಎಲೆಯನ್ನು ಜಿಗಿದು ಅದರ ರಸವನ್ನು ಸೇವಿಸಬಹುದು. ಲೂಸ್ ಮೋಷನ್ ಗೆ ಪೇರಳೆ ಹಣ್ಣಿನ ತೊಗಟೆಯನ್ನು ಬಳಸಿ ಮಾಡಿದ ಕಷಾಯವನ್ನು ಔಷಧಿಯಾಗಿ ಲೂಸ್ ಮೋಷನ್ ಗೆ ಸೇವಿಸುತ್ತಾರೆ.
> ನೇರಳೆ : ನೇರಳೆ ಹಣ್ಣಿಗಿಂತ ಅದರ ಬೀಜ ಡಯಾಬಿಟಿಸ್ ಅಂದರೆ ಸಕ್ಕರೆ ಕಾಯಿಲೆಗೆ ಒಳ್ಳೆಯ ಔಷಧಿಯಾಗಿದೆ. ಇದೊಂದು ರೋಗ ನಿರೋಧಕ ಔಷಧಿಯಾಗಿದೆ.
ಈ ನೇರಳೆ ಬೀಜದ ಪುಡಿಯನ್ನು ಬಳಸುವುದರಿಂದ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ.
>ಕರಿಬೇವು: ಇದರಲ್ಲಿ ಕಬ್ಬಿಣದ ಅಂಶ ಜಾಸ್ತಿ ಇದ್ದುದರಿಂದ ಮಕ್ಕಳಿಗೆ,ಗರ್ಭಿಣಿಯರಿಗೆ, ಬಾಣಂತಿಯರಿಗೆ ಕಬ್ಬಿಣ ಅಂಶದ ಮಾತ್ರೆಯ ಬದಲು ಕರಿಬೇವನ್ನು ಅಥವಾ ನುಗ್ಗೆಸೊಪ್ಪನ್ನು ಕೊಡಬಹುದು.
>ತುಳಸಿ :
ಇದೊಂದು ಆ್ಯಂಟಿ ವೈರಲ್ ಡ್ರಗ್. ಜ್ವರ ಹಾಗೂ ಶೀತಕ್ಕೆ ಇದರ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ಮತ್ತು ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿ. ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.