ಕೊರೊನಾ ಭೀತಿ ಮಂಗನ ಕಾಯಿಲೆಯ ಫಜೀತಿ.....

ಕರ್ನಾಟಕದಾದ್ಯಂತ ಕೊರೊನಾ ವೈರಾಣು ಸೋಂಕು ಹಬ್ಬುತ್ತಲೇ ಇದೆ 33 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ . ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮಂಗನಕಾಯಿಲೆ(ಕೆ.ಎಫ್.ಡಿ) ರೋಗ ಪೀಡಿತರ ಸಂಖ್ಯೆ 149ಕ್ಕೆ ತಲುಪಿದೆ.
ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಜನ ಈ ರೋಗಕ್ಕೆ  ಬಲಿಯಾಗುತ್ತಿದ್ದಾರೆ ಈ ಮಾರಕ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾಯಿಲೆಗೆ   ತುತ್ತಾದವರ ಪೈಕಿ ತೀರ್ಥಹಳ್ಳಿ, ಸಾಗರ, ತಾಲೂಕಿನ ಜನರೇ ಅತಿ ಹೆಚ್ಚು .

ವೈದ್ಯಕೀಯ ಸಿಬ್ಬಂದಿ ವೈದ್ಯರು ಎಷ್ಟು ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು (ಕೆ.ಎಫ್.ಡಿ)
ರೋಗ ನಿರಂತರವಾಗಿ ಹಬ್ಬುತ್ತಲೇ ಇದೆ.
 ಈ ರೋಗದ 3 ಡೋಸ್ ಲಸಿಕೆ ತೆಗೆದುಕೊಂಡವರನ್ನು  (ಕೆ.ಎಫ್.ಡಿ) ರೋಗಮತ್ತೆ ತಗುಲಿರುವುದು ಮಲೆನಾಡಿನ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.  ಸರ್ಕಾರ ಶೀಘ್ರವಾಗಿ ಈ ರೋಗಕ್ಕೆ ಸೂಕ್ತ ನಿರ್ದಿಷ್ಟ ಲಸಿಕೆಯನ್ನು ಕಂಡು ಹಿಡಿಯಲೇ ಬೇಕೆಂದು ಒತ್ತಡ ಹೇರುತ್ತಿದ್ದಾರೆ.
 
ಚಿಕ್ಕಮಂಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮಡಬೂರು ಎಸ್ಟೇಟ್ ನಲ್ಲಿ ಈವರೆಗೆ 10 ಪ್ರಕರಣಗಳು ದೃಢಪಟ್ಟಿವೆ.9 ಮಂದಿ ಗುಣಮುಖರಾಗಿದ್ದಾರೆ ಎಂದು ತಾಲೂಕಿನ ವೈದ್ಯಾಧಿಕಾರಿ ಡಾಕ್ಟರ್ ವೀರ ಪ್ರಸಾದ್ ತಿಳಿಸಿದರು.
ಇದೇ ಎಸ್ಟೇಟಿನ 53 ವರ್ಷದ ವ್ಯಕ್ತಿಗೆ   ಮಂಗನ ಕಾಯಿಲೆ ಇರುವುದು ಸದ್ಯಕ್ಕೆ ದೃಢಪಟ್ಟಿದೆ.