ಕೊರೊನಾದಿಂದ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ನೆರವಾದ ಲೂಸಿಯಾ ಪವನ್ ಕುಮಾರ್.....

ಕೊರೊನಾ ವೈರಸ್ ನಿಂದ ಎಲ್ಲ ವಲಯಗಳೂ     ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ದೇಶದೆಲ್ಲೆಡೆ ಎಂದೂ ಕಾಣದಂತಹ ಎಲ್ಲ ಉದ್ಯಮಗಳಲ್ಲೂ ಭಾರಿ ಕುಸಿತ ಕಾಣುತ್ತಿದೆ .

ಸಿನಿಮಾ ರಂಗದಲ್ಲಂತೂ  ತಲ್ಲಣಿಸಿ ಹೋಗಿದೆ.ಇನ್ನು ಸಿನಿಮಾವನ್ನೇ ನಂಬಿಕೊಂಡಿದ್ದ ಅಸಂಖ್ಯ ದಿನಗೂಲಿ ನೌಕರರು, ಜ್ಯೂನಿಯರ್ ಆರ್ಟಿಸ್ಟ್‌ಗಳು, ಸಿನಿಮಾಕ್ಕೆ ಪರೋಕ್ಷವಾಗಿ ಕೆಲಸ ಮಾಡುವ ದಿನಗೂಲಿ ಪಡೆವ ಸಿಬ್ಬಂದಿಗಳ ಜೀವನ ನಡೆಸುವುದು ಹೇಗೆಂದು ಗೊತ್ತಾಗದೆ  ತಲೆಯ ಮೇಲೆ ಕೈಹೊತ್ತು ಕೂತಿದ್ದಾರೆ. 

ಆದರೆ ಇಂಥಹವರ ಸಹಾಯಕ್ಕೆ ಸ್ಟಾರ್ ನಾಯಕರು ಒಬ್ಬೊಬ್ಬರಾಗಿ ಮುಂದೆ ಬರುತ್ತಿದ್ದಾರೆ.ತಮಿಳಿನ ಖ್ಯಾತ ನಟ ಸೂರ್ಯ ಅವರು ಹತ್ತು ಲಕ್ಷ ರೂಪಾಯಿಯನ್ನು ಸಿನಿಮಾ ಕಾರ್ಮಿಕರ ಕಲ್ಯಾಣಕ್ಕಾಗಿ ನೀಡಿದ್ದಾರೆ. ಹಾಗೂ ತೆಲುಗಿನ ಖ್ಯಾತ ನಟ ನಿತಿನ್ ಅವರು ಮುಖ್ಯಮಂತ್ರಿಗಳ ಸಹಾಯ ನಿಧಿಗೆ 20 ಲಕ್ಷ ರೂಪಾಯಿ ಹಣ ನೀಡಿದ್ದಾರೆ.

ನಮ್ಮ ಕನ್ನಡದ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅವರು ಸಹ ಸಿನಿಮಾ ದಿನಗೂಲಿ ಕಾರ್ಮಿಕರ ಸಹಾಯಕ್ಕೆಂದು ಭಾನುವಾರದಂದು ಕೆಲ ಆನ್‌ಲೈನ್ ಕಾರ್ಯಕ್ರಮಗಳನ್ನು ಮಾಡಿ ಹಣ ಒಟ್ಟುಗೂಡಿಸಿ, ತಾವೂ ಹಣ ಹಾಕಿ ಕಲ್ಯಾಣ ನಿಧಿಗೆ ನೀಡಿದ್ದಾರೆ.

ಎಫ್‌ಇಎಫ್‌ಎಸ್‌ಐ (ಫಿಲ್ಮ್‌ ಎಂಪ್ಲಾಯಿಸ್ ಫೆಡರೇಶನ್ ಆಫ್ ಸೌತ್‌ ಇಂಡಿಯಾ) ದೇಣಿಗೆ ನೀಡಬಲ್ಲ ನಟರು ಸಿನಿ ಕಾರ್ಮಿಕರ ಕಲ್ಯಾಣಕ್ಕೆ ಸಹಾಯ ಮಾಡುವಂತೆ ದಕ್ಷಿಣ ಸಿನಿಮಾರಂಗದ ನಟರಿಗೆ ಮನವಿ ಮಾಡಿತ್ತು.ಇದರಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ನಟರು ಸಹಾಯ ಮಾಡಬಹುದು ಎನ್ನಲಾಗುತ್ತದೆ .