ಧಾರವಾಡದಲ್ಲಿ ವಿಭಿನ್ನವಾದ ರೀತಿಯಲ್ಲಿ ನಡೆದ ಪ್ರತಿಭಟನೆ
ದೇಶಾದ್ಯಂತ ಪೆಟ್ರೋಲ್ , ಡೀಸೆಲ್, ಸಿಲಿಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಧಾರವಾಡದಲ್ಲಿ ಜನರು ಕಟ್ಟಿಗೆಗಳನ್ನು ತಲೆ ಮೇಲೆ ಹೊತ್ತಿಕೊಳ್ಳುವ ಮೂಲಕ ಪ್ರತಿಭಟನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ
ಪೆಟ್ರೋಲ್,ಡೀಸೆಲ್ ಹಾಗೂ ಸಿಲಿಂಡರ್ ಗಳ ದರ ಏರಿಕೆಯಾದ ಹಿನ್ನಲೆಯಲ್ಲಿ, ಧಾರವಾಡದ ಜನರು ರಸ್ತೆಗಿಳಿದು ವಿಭಿನ್ನವಾದ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಧಾರವಾಡದ ವಿವೇಕಾನಂದ ವೃತ್ತದಲ್ಲಿ, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದು, ತಲೆ ಮೇಲೆ ಕಟ್ಟಿಗೆಗಳನ್ನ ಹೊತ್ತುಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಇನ್ಮುಂದೆ ಸಿಲಿಂಡರ್ ಸಿಗಲ್ಲ, ಕಟ್ಟಿಗೆ ಕೊಂಡುಕೊಂಡು ಅಡುಗೆ ಮಾಡಿ ಎನ್ನುವ ಘೋಷಣೆಗಳನ್ನ ಕೂಗಿದ್ದು, ಸ್ಥಳಕ್ಕೆ ಆಗಮಿಸಿದ್ದ ಜನರಿಗೆ ಕಟ್ಟಿಗೆ ಕೊಟ್ಟು ಕಳುಹಿಸಿದ್ದಾರೆ.
33 ರೂಪಾಯಿ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ
ನೆನ್ನೆ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಇದೇ ಪ್ರಕರಣದ ಕುರಿತು ಪ್ರತಿಭಟನೆ ಮಾಡಿದ್ದರು. ಕೆಲವರು ಸ್ಕೂಟರ್ ಹೊತ್ತಿಕೊಂಡು ಬಂದಿದ್ದು, ಪಕ್ಷದ ಇತರ ಸದಸ್ಯರು ಕುದುರೆ ಏರಿ ಬಂದರು.
ಮಹಿಳಾ ಕಾರ್ಯಕರ್ತೆ ಸವುದೆ ಉಪಯೋಗಿಸಿ ಭಜ್ಜಿ, ಪಲಾವ್ ತಯಾರಿಸಿದ್ದರು .ಲೀಟರ್ ನ ಪೆಟ್ರೋಲ್ ದರದಲ್ಲಿ 33 ರೂಪಾಯಿ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಜನರನ್ನು ಸೇರಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದರು.