ಪ್ರಧಾನಿ ನರೇಂದ್ರ ಮೋದಿಯಿಂದ ಬಂಗಾಳದಲ್ಲಿ ಬದಲಾವಣೆಯ ಭರವಸೆಯ ಮಾತು
ಪಶ್ಚಿಮಬಂಗಾಳದಲ್ಲಿ ದಿನೇದಿನೇ ಚುನಾವಣೆ ಹತ್ತಿರ ಬರ್ತಾ ಇದೆ ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಮಾತನಾಡಿದ್ದಾರೆ. ಬಿಜೆಪಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರೆ ರಾಜ್ಯವನ್ನು ಹಿಂದಿನ ವೈಭವಕ್ಕೆ ಕೊಂಡೊಯ್ಯುತ್ತೇವೆ ಎಂದು ಭರವಸೆಯ ಮಾತುಗಳನ್ನು ಮಾತನಾಡಿದ್ದಾರೆ. ಕೋಲ್ಕತ್ತಾದಿಂದ ನದಿಗೆ ಅಡ್ಡಲಾಗಿ ಹೂಗ್ಲಿ ಕೈಗಾರಿಕಾ ಪಟ್ಟಿಯ ಚಿನ್ಸುರದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಬಿಜೆಪಿ ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಮಾದರಿಯನ್ನು ರಾಜ್ಯ ಸರ್ಕಾರದ ಸಮಾಧಾನಕರ ರಾಜಕೀಯಕ್ಕೆ ಮೈನಸ್ ಮಾಡುತ್ತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಮೂಲಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಇಂದಿನ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿಲ್ಲ. ಮತ್ತು ಮಹಿಳೆಯರಿಗೆ ಸಹಾಯ ಮಾಡಲು ಪ್ರತಿ ಹಳ್ಳಿಯಲ್ಲಿ ಕೊಳವೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ ಯೋಜನೆಗಾಗಿ ನಾವು ಬಂಗಾಳಕ್ಕೆ 1700 ಕೋಟಿ ರೂಪಾಯಿ ನೀಡಿದ್ದೇವೆ ಆದರೆ ರಾಜ್ಯ ಸರ್ಕಾರ ಇದುವರೆಗೆ ಕೇವಲ 609 ಕೋಟಿ ರೂಪಾಯಿ ಕೆಲಸ ಮಾತ್ರ ಮಾಡಿದೆ. ಈ ರೀತಿ ಇಲ್ಲಿಯ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ಈ ಬಾರಿ ಸರ್ಕಾರ ಬದಲಾವಣೆಯಾಗಬೇಕು ಜನರು ಬದಲಾವಣೆ ಬಯಸುತ್ತಿದ್ದಾರೆ. ಎಂದು ಪ್ರಧಾನಿ ಮೋದಿ ಬಿಜೆಪಿಯನ್ನು ಈ ಬಾರಿ ಪಶ್ಚಿಮ ಬಂಗಾಳದ ಗದ್ದುಗೆ ಏರಬೇಕು ಅನ್ನುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.
ವರದಿ: ಬಸವರಾಜ್ ಹೂಗಾರ್