ಮನೆಯಲ್ಲಿ ಬೆಳ್ಳುಳ್ಳಿ ಬೆಳೆಯುವುದು ಹೇಗೆ ?
ಮನೆಯ ಹಿತ್ತಲಲ್ಲೇ ಬೆಳೆದುಕೊಳ್ಳಬಹುದಾದ ಅತ್ಯದ್ಭುತವಾಗಿರುವ ಗಿಡವೆಂದರೆ ಅದು ಬೆಳ್ಳುಳ್ಳಿ. ಹಲವು ರೀತಿಯ ಅಡುಗೆಗಳಲ್ಲಿ ನಾವು ಬೆಳ್ಳುಳ್ಳಿಯನ್ನು ಬಳಕೆ ಮಾಡುತ್ತೇವೆ. ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಉಪಯೋಗಕಾರಿಯಾಗಿರುವ ಬೆಳ್ಳುಳ್ಳಿಯನ್ನು ನಿಜಕ್ಕೂ ಆಗಾಗ ಸೇವಿಸುತ್ತಲೇ ಇರಬೇಕು.
ಬೆಳ್ಳುಳ್ಳಿ ಬೆಳೆಯುವುದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಸೂರ್ಯನ ಬೆಳಕು ಜೊತೆಗೆ ತಿಳಿಯಾದ ಮಣ್ಣು ಮತ್ತು ಅದರಲ್ಲಿ ಹೀರಿಹೋಗುವಂತಹ ನೀರಿನಂಶ. ಬೆಳ್ಳುಳ್ಳಿಯ ಬಲ್ಬ್ ಗಳು ಅಂದರೆ ಬೆಳ್ಳುಳ್ಳಿಯ ಗಡ್ಡೆಗಳು ಅತಿಯಾದ ನೀರಿನಂಶವನ್ನು ಸಹಿಸುವುದಿಲ್ಲ. ನೀರಿನಂಶದ ಸರಿಯಾದ ಹೀರುವಿಕೆಯನ್ನು ಮಾಡುವುದಕ್ಕಾಗಿ ನೀವು ಸಾವಯವ ಗೊಬ್ಬರವನ್ನು ಬಳಸಬೇಕಾಗುತ್ತದೆ. ಉತ್ತಮ ಗೊಬ್ಬರದ ಬಳಕೆಯು ಮನೆಯ ಪಾಟ್ ನಲ್ಲಿ ಬೆಳ್ಳುಳ್ಳಿ ಬೆಳೆಯುವುದಕ್ಕೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ಮನೆಯ ಪಾಟ್ ನಲ್ಲೇ ಬೆಳ್ಳುಳ್ಳಿ ಬೆಳೆಯುವುದಕ್ಕಾಗಿ 20 ಸೆಂಟೀಮೀಟರ್ ಅಥವಾ 8 ಇಂಚು ವ್ಯಾಸದಲ್ಲಿರುವ ಪಾಟ್ ಅನ್ನು ನೀವು ಬಳಕೆ ಮಾಡಬೇಕಾಗುತ್ತದೆ. ಇದೇ ಮೇಲಿನ ಅಳತೆಯ ಆಳದ ಪಾಟ್ ಆಗಿದ್ದರೆ ಬೆಳ್ಳುಳ್ಳಿ ಗಿಡದ ಬೇರುಗಳು ಬಲವಾಗಿ ಬೆಳೆಯುವುದಕ್ಕೆ ನೆರವಾಗುತ್ತದೆ. ಒಮ್ಮೆ ನೀವು ಬೆಳ್ಳುಳ್ಳಿ ಬೀಜಗಳನ್ನು ಬಿತ್ತಿದ ನಂತರ ಬಹುಪಯೋಗಿ ಕಾಂಪೋಸ್ಟ್ ಮತ್ತು ಸ್ವಲ್ಪವೇ ಸ್ವಲ್ಪ ಸಾವಯವ ಗೊಬ್ಬರವನ್ನು ಮೇಲಿನಿಂದ ಸೇರಿಸಿ.
ಬೆಳ್ಳುಳ್ಳಿ ನೆಡುವ ವಿಧಾನ ಪ್ರತಿಯೊಂದು ಬೆಳ್ಳುಳ್ಳಿಯ ಬೀಜಗಳನ್ನು ಒಂದು ಇಂಚಿನಷ್ಟು ದೂರದಲ್ಲಿ ನೆಡಬೇಕು. ಈ ಜಾಗವು ಬೆಳ್ಳುಳ್ಳಿ ಬೀಜಗಳನ್ನು ಅತ್ಯುತ್ತಮವಾಗಿ ಬೆಳೆಯುವುದಕ್ಕೆ ಅನುಕೂಲ ಮಾಡಿಕೊಡುವಂತಿರಬೇಕು. ನೀವು ತಳಿದಿರುವ ಕಾಂಪೋಸ್ಟ್ ಎಲ್ಲಾ ಸಮಯದಲ್ಲೂ ತೇವವಾಗಿರುವುದು ಒಳ್ಳೆಯದು. ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ತೇವಾಂಶದ ಪ್ರಮಾಣವು ಸಮತೋಲನದಲ್ಲಿದ್ದರೆ ಬೆಳ್ಳುಳ್ಳಿ ಬೆಳವಣಿಗೆ ಅತ್ಯುತ್ತಮವಾಗಿರುತ್ತದೆ.